ಕರೋನ ಎಫೆಕ್ಟ್ ಕರ್ನಾಟಕ ರಾಜ್ಯಕ್ಕೆ ಪ್ರವಾಸೋದ್ಯಮ ದಿನದಿಂದ ತುಂಬಲಾರದ ನಷ್ಟ

454
Share

ಸ್ಟೇಕ್ ಹೋಲ್ಡರ್ಸ್‍ಗಳಿಂದ ದತ್ತಾಂಶ ಸಂಗ್ರಹಿಸಲು ಆಹ್ವಾನ
ಮೈಸೂರು. ಮೇ.11.(ಕರ್ನಾಟಕ ವಾರ್ತೆ):- ಪ್ರವಾಸೋದ್ಯಮ ಇಲಾಖೆ ಮತ್ತು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ, ಕೋವಿಡ್-19 ಸಾಂಕ್ರಾಮಿಕ ರೋಗದ ಪರಿಣಾಮದಿಂದಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಉದ್ಯಮಕ್ಕೆ ಅಂದಾಜಿಸಲಾಗದಷ್ಟು ರೀತಿಯಲ್ಲಿ ನಷ್ಟವುಂಟಾಗಿರುವ ಕಾರಣದಿಂದ ದತ್ತಾಂಶವನ್ನು ಸಂಗ್ರಹಿಸಿಕೊಂಡಿರುವ ಸ್ಟೇಕ್ ಹೋಲ್ಡರ್ಸ್‍ಗಳಾದ ಚಾಲಕರು, ಟೂರ್ಸ್ ಅಂಡ್ ಟ್ರಾವೆಲ್ಸ್ ಏಜೆನ್ಸಿ ಹೋಟೆಲ್ ಮಾಲೀಕರು, ಇತರೆ ಅಸೋಸಿಯೇಷನ್‍ಗಳ ಮೂಲಕ ದತ್ತಾಂಶವನ್ನು ಪಡೆಯುವುದು ಸೂಕ್ತವಾಗಿರುತ್ತದೆ ಎಂದು ತೀರ್ಮಾನಿಸಲಾಗಿರುತ್ತದೆ.
ಈ ಸಂಬಂಧ ನಮೂನೆಯನ್ನು ಸಿದ್ಧಪಡಿಸಿದ್ದು, ಸದರಿ ನಮೂನೆಗಳು ಉಚಿತವಾಗಿ ಜಿಲ್ಲಾ ಪ್ರವಾಸೋದ್ಯಮ ಕಚೇರಿಯಲ್ಲಿ ದೊರೆಯಲಿದೆ. ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ನೇರವಾಗಿ ಮೊಬೈಲ್ ಸಂಖ್ಯೆ 8494922277 ವ್ಯಾಟ್ಸ್‍ಆ್ಯಪ್ ಮೂಲಕ ಕಳುಹಿಸುವುದು ಅಥವಾ ವ್ಯವಸ್ಥಾಪಕ ನಿರ್ದೇಶಕರು, ಕೆ.ಎಸ್.ಟಿ.ಡಿ.ಸಿ. ಬೆಂಗಳೂರು ಇವರಿಗೆ ದಿನಾಂಕ 12-05-2020 ರೊಳಗಾಗಿ ಇ-ಮೇಲ್ md@kstdc.co ಅಥವಾ ಪ್ರವಾಸೋದ್ಯಮ ಕೇಂದ್ರ ಕಚೇರಿಯ ಪ್ರಚಾರ ಶಾಖೆಯ tourismkarnatakapublicity@gmail.com ಈ ವಿಳಾಸಕ್ಕೆ ಮೇಲ್ ಮಾಡಬಹುದು ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ


Share