ಪತ್ರಿಕಾ ಪ್ರಕಟಣೆ
ಕೋವಿಡ್-೧೯ ನಿಂದ ಗುಣಮುಖರಾದ ೩೪ ಮಂದಿ ಬಿಡುಗಡೆ
ರಾಯಚೂರು,ಮೇ.೩೧.(ಕ.ವಾ)- ನೋವೆಲ್ ಕೊರೋನಾ ವೈರಸ್ ದೃಢಪಟ್ಟ ಹಿನ್ನಲೆಯಲ್ಲಿ ಚಿಕಿತ್ಸೆಗೆಂದು ನಗರದ ಒಪೆಕ್ ಆಸ್ಪತ್ರೆಯಲ್ಲಿರುವ ಕೋವಿಡ್-೧೯ ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿ ೩೪ ಮಂದಿ ಸಂಪೂರ್ಣವಾಗಿ ಗುಣಮುಖರಾಗಿ ಆರೋಗ್ಯವಂತ ಸ್ಥಿತಿ ತಲುಪಿದ ಹಿನ್ನಲೆಯಲ್ಲಿ ಅವರನ್ನು ಮೇ.೩೧ರ ಭಾನುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ನಗರದ ಕೋವಿಡ್ ಆಸ್ಪತ್ರೆಯ ಆವರಣದಲ್ಲಿ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ರಿಮ್ಸ್ ಡೀನ್ ಡಾ. ಬಸವರಾಜ ಪೀರಾಪುರ, ಒಪೆಕ್ ವಿಶೇಷಾಧಿಕಾರಿ ಡಾ. ನಾಗರಾಜ ಗದ್ವಾಲ್, ಜಿಲ್ಲಾ ಸರ್ಜನ್ ಡಾ. ವಿಜಯ ಶಂಕರ್, ಡಿಎಸ್‌ಒ ಡಾ. ನಾಗರಾಜ ಹಾಗೂ ಇತರೆ ಅಧಿಕಾರಿಗಳು ಗುಣಮುಖರಾದ ರೋಗಿಗಳ ಮೇಲೆ ಪುಷ್ಪವೃಷ್ಟಿಗರೆದು ಸ್ವಾಗತಿಸಿ, ಅವರನ್ನು ಆಸ್ಪತ್ರೆಯಿಂದ ಆಂಬುಲೇನ್ಸ್ ಮೂಲಕ ಅವರವರ ಮನೆಗೆ ಕಳುಹಿಸಿಕೊಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಅವರು ಮಾತನಾಡಿ, ಹಸಿರು ವಲಯದಲ್ಲಿ ಗುರುತಿಸಿಕೊಂಡಿದ್ದ ಜಿಲ್ಲೆಯಲ್ಲಿ ಇದೇ ಮೇ. ೧೭, ೧೮ ಮತ್ತು ೧೯ ರಂದು ಕೋವಿಡ್-೧೯ ಸೋಂಕು ಹರಡಿರುವುದು ದೃಢ ಪಟ್ಟನಂತರ ಎಲ್ಲ ಸೋಂಕಿತರನ್ನು ಓಪೆಕ್ ಆಸ್ತೆçಯಲ್ಲಿರುವ ಐಸೋಲೇಷನ್ ವಾರ್ಡ್ ಸ್ಥಳಾಂತರಿಸಿ, ೧೪ ದಿನಗಳ ಕಾಲ ಚಿಕಿತ್ಸೆ ನೀಡಿದ ನಂತರ ಗುಣಮುಖರಾದವರನ್ನು ಇಂದು ಬಿಡುಗಡೆ ಮಾಡಲಾಗಿದೆ ಎಂದರು.
ರಾಯಚೂರು ನಗರ, ಆಟೋ ನಗರ, ಮಡ್ಡಿಪೇಟೆ, ಮಂದ್ರಕಲ್ ಗ್ರಾಮಕ್ಕೆ ಸೇರಿದ ಕೊರೋನಾ ಸೋಂಕಿತರು ಗುಣಮುಖರಾದ ನಿಟ್ಟಿನಲ್ಲಿ ಬಿಡುಗಡೆ ಮಾಡಲಾಗಿದೆ. ಬಿಡುಗಡೆ ಹೊಂದಿರುವ ಸೋಂಕಿತರು ಇಂದಿನಿAದ ೧೪ ದಿನಗಳ ಕಾಲ ಕಡ್ಡಾಯವಾಗಿ ಹೋಂ ಕ್ವಾರೆಂಟೈನ್‌ನಲ್ಲಿಯೇ ಇರಬೇಕು, ಅವರ ಕೈಗಳ ಮೇಲೆ ಠಸ್ಸೆ ಹಾಕಲಾಗಿದೆ, ಸೋಂಕಿತರ ಕೋವಿಡ್ ತಪಾಸಣೆಯನ್ನು ಎರಡು ಬಾರಿ ಪರೀಕ್ಷೆ ಮಾಡಿದ ನಂತರ ನೆಗೆಟಿವ್ ಎಂದು ವರದಿ ಬಂದನAತರ ಇಂದು ಬಿಡುಗಡೆ ಮಾಡಲಾಗಿದೆ ಎಂದರು.
ಬಿಡುಗಡೆ ಹೊಂದಿರುವ ಸೋಂಕಿತರು ಮನೆಯಲ್ಲಿರಬೇಕು, ಯಾರ ಸಂಪರ್ಕಕ್ಕೆ ಹೋಗಬಾರದು ಇವರ ಮೇಲೆ ನಿಗಾವಹಿಸಲು ಪೊಲೀಸರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರತಿ ನಿತ್ಯ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ, ಸಂಬAಧಿಸಿದವರಿಗೆ ಪಟ್ಟಿಯನ್ನು ನೀಡಲಾಗಿದೆ, ರಾಯಚೂರು ತಾಲೂಕಿನ ಹೊಸ ಮಲಿಯಬಾದ್ ಗ್ರಾಮಕ್ಕೆ ಸೇರಿದ ಬಾಲಕಿಯನ್ನು ಸಹ ಇಂದು ಬಿಡುಗಡೆ ಮಾಡಲಾಗುತ್ತದೆ. ಅಲ್ಲದೇ ಮಲಿಯಬಾದ್ ಗ್ರಾಮದಲ್ಲಿ ಕಂಟೆನ್ಮೆAಟ್ ಝೋನ್ ೨೮ ದಿನಗಳ ಕಾಲ ಮುಂದುವರಿಯಲಿದೆ ಎಂದು ತಿಳಿಸಿದರು.
ದೇವದುರ್ಗ ತಾಲೂಕಿನ ಕೋತಿಗುಡ್ಡ ಗ್ರಾಮದಲ್ಲಿ ಮೃತ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಕೊರೋನಾ ನಿಯಾವಳಿಯಂತೆ ಶವಸಂಸ್ಕಾರ ಮಾಡಲಾಗಿದೆ. ಶವಸಂಸ್ಕಾರದಲ್ಲಿ ಭಾಗಿಯಾದವರ ಮೇಲೆ ನಿಗಾವಹಿಸಲಾಗಿದೆ ಎಂದರು. ಮಹಾರಾಷ್ಟçದಿಂದ ಇನ್ನೂ ಜಿಲ್ಲೆಗೆ ಆಗಮಿಸಲು ೨೦೦ಕ್ಕೂ ಹೆಚ್ಚು ಅರ್ಜಿಗಳು ಬಾಕಿಯಿವೆ. ಸರಿ ಸುಮಾರು ೧೫೦೦ಜನ ಬರುವ ನಿರೀಕ್ಷೆಯಿದೆ ಎಂದರು.
ಮಹಮಾರಿ ಕೊರೋನಾ ವೈರಸ್ ನಿಂದ ಗುಣಮುಖರಾಗಿ ಆಸ್ಪತೆಯಿಂದ ಬಿಡುಗಡೆ ಭಾಗ್ಯ ದೂರೆಯುತ್ತಿದಂತೆ ಎಲ್ಲರ ಮುಗದಲ್ಲಿ ಸಂತೋಷ ತುಂಬಿತ್ತು. ಸೋಂಕಿನಿAದ ಗುಣಮುಖರಾದ ಎಂಬ ಸಂತೋಷ ಎಲ್ಲರಲ್ಲಿತ್ತು. ಆಂಬುಲೈನ್ಸ್ನಲ್ಲಿ ಅವರ ಮನೆಗಳಿಗೆ ಕಳುಹಿಸಿಕೂಡಲಾಯಿತು.
ಆರ್‌ಟಿ-ಪಿಸಿಆರ್ ಪ್ರಯೋಗಾಲಯ ಕಾರ್ಯಾರಂಭ
ರಾಯಚೂರು,ಮೇ.೩೧- ನಗರದ ರಿಮ್ಸ್ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸುಮಾರು ೧ ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ಕೋವಿಡ್ ಆರ್‌ಟಿ-ಪಿಸಿಆರ್ ಪ್ರಯೋಗಾಲಯ ಮೇ.೩೧ರ ಭಾನುವಾರದಿಂದ ಕಾರ್ಯಾರಂಭ ಮಾಡಲಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅವರು ತಿಳಿಸಿದರು.
ಅವರು ಮೇ.೩೧ರ ಭಾನುವಾರ ನಗರದ ರಿಮ್ಸ್ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸ್ಥಾಪಿಸಿರುವ ಕೋವಿಡ್ ಪ್ರಯೋಗಾಲಯವನ್ನು ಪರಿಶೀಲಿಸಿದ ನಂತರ, ಈ ಲ್ಯಾಬ್ ಇಂದಿನಿAದ ಕಾರ್ಯಾರಂಭ ಮಾಡಲಿದೆ, ಮೇ.೩೧ರ ಭಾನುವಾರ ೯೬ ಸ್ಯಾಂಪಲ್‌ಗಳನ್ನು ಪರೀಕ್ಷೆ ಮಾಡಲಾಗಿದ್ದು ಸಂಜೆ ವರದಿ ಬರಲಿದೆ. ಆರ್.ಟಿ.ಪಿ.ಸಿ.ಆರ್ ನಲ್ಲಿ ಟ್ಯೂನ್ಯಾಟ್ ಯಂತ್ರವನ್ನು ಅಳವಡಿಸಲಾಗಿದೆ. ಮೂರು ಪಾಳೆ ಪ್ರಕಾರ ಸ್ಯಾಂಪಲ್ ಪರೀಕ್ಷೆ ಮಾಡಲಾಗುತ್ತದೆ. ಇದೂವರೆಗೂ ಹೊರರಾಜ್ಯಗಳಿಂದ ಜಿಲ್ಲೆಗೆ ಬಂದ ೧೧,೩೦೦ ಸ್ಯಾಂಪಲ್‌ಗಳ ವರದಿ ಬಂದಿದೆ. ಅವರ ೩೦೦೦ ಸ್ಯಾಂಪಲ್‌ಗಳ ವರದಿ ಬಾಕಿಯಿದೆ, ಅವೆಲ್ಲವೂ ಬೆಂಗಳೂರಿನ ಲ್ಯಾನ್‌ನಲ್ಲಿದೆ ಎಂದರು.
ಸೋಂಕಿತರ ಜೊತೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದವರ ಹಾಗೂ ಚೆಕ್‌ಪೋಸ್ಟ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರು, ಆರೋಗ್ಯ ಇಲಾಖೆಯವರು ಹಾಗೂ ಇತರೆ ಅಧಿಕಾರಿಗಳಗೆನಾದರೂ ಸೋಂಕು ಹರಡಿದ ಬಗ್ಗೆ ಶಂಕೆ ವ್ಯಕ್ತವಾದಲ್ಲಿ ಅವರ ಪರೀಕ್ಷೆಯನ್ನು ಇಲ್ಲಿ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಮತ್ತು ರಿಮ್ಸ್ ಡೀನ್ ಡಾ.ಬಸವರಾಜ್ ಪೀರಾಪುರ ಇದ್ದರು.
ಕೊವಿಡ್-19: ಗದಗ ಜಿಲ್ಲೆ ಇಬ್ಬರು ಸೋಂಕಿತರ ಬಿಡುಗಡೆ
ಗದಗ ಜಿಲ್ಲೆಯಲ್ಲಿ ಕೊವಿಡ್-19 ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಪಿ-1745 – 17 ವರ್ಷದ ಯುವಕ, ಪಿ-1795 – 16 ವರ್ಷದ ಯುವಕ ಇವರುಗಳು ಆಗಿದ್ದಾರೆ ಬಿಡುಗಡೆ ಆಗಿದ್ದಾರೆ. ಇವರು ಗುಜರಾತ ದಿಂದ ಆಗಮಿಸಿದ್ದ ಪಿ-913 ಸೋಂಕಿತ ವ್ಯಕ್ತಿಯ ದ್ವಿತೀಯ ಸಂಪರ್ಕಿತರಾಗಿದ್ದರು ಎಂದು ಎಂದು ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ. ಭೂಸರಡ್ಡಿ ತಿಳಿಸಿದ್ದಾರೆ.