ಕರೋನಾ ಕರ್ಚು: ಲೆಕ್ಕ ಕೊಟ್ಟ ಆಡಳಿತ ಪಕ್ಷ

Share

ಬೆಂಗಳೂರು ,ವಿರೋಧ ಪಕ್ಷದ ನಾಯಕರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಅಶೋಕ್ ಕಿಡಿಕಾರಿದ್ದಾರೆ.
ವಿರೋಧ ಪಕ್ಷದ ನಾಯಕರು ಸರಿಯಾದ ದಾಖಲೆ ಇಲ್ಲದೆ ಆರೋಪ ಮಾಡಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅಶೋಕ್ ತಿಳಿಸಿದರು. ವಿರೋಧಪಕ್ಷದವರು ಏನು ಹೈಲೈಟ್ ಮಾಡಿದ್ದಾರೆ ಅದನ್ನೇ ನಾವು ಇಂದಿನ ಪತ್ರಿಕಾಗೋಷ್ಠಿಯಲ್ಲಿ ಹೈಲೆಟ್ ಮಾಡಿ ಉತ್ತರ ಕೊಡುತ್ತೇವೆ.
ಪತ್ರಕರ್ತರು ಕೇಳಿದ ಪ್ರಶ್ನೆಗೆ ಹಾಗೆ ಬರ್ಕೊಳ್ಳಿ ಎಂದು ಉದ್ಧಟತನದಿಂದ ಅಶೋಕ್ ಅವರು ಉತ್ತರ ನೀಡಿದರು. ನಾವು ಕೊಟ್ಟಿರವ ಲೆಕ್ಕ ಸರಿಯಾಗಿ ನೋಡದೆ. ಸಿದ್ದರಾಮಯ್ಯನವರು ಮಾತನಾಡಿದ್ದಾರೆ, ಕಾಮಾಲೆ ಕಣ್ಣಿಗೆ ಕಾಣುವುದೆಲ್ಲ ಹಳದಿ ಎನ್ನುವ ರೀತಿಯಲ್ಲಿ ಡಿಕೆ ಶಿವಕುಮಾರ್ ಅವರು ಮಾತನಾಡಿದ್ದಾರೆ ಎಂದು ಅಶೋಕ್ ವಾಗ್ದಾಳಿ ನಡೆಸಿದರು.
ವಿರೋಧಪಕ್ಷದವರು ರಾಜ್ಯಮಟ್ಟದಲ್ಲಿ ಲೆಕ್ಕ ನೀಡಿದ್ದಾರೆ,.
ಆದರೆ ನಾನು ಜಿಲ್ಲಾಮಟ್ಟದಲ್ಲಿ ಖರೀದಿಸಿರುವ ಲೆಕ್ಕ ನೀಡಿದ್ದೇನೆ ಎಂದು ಅಶೋಕ್ ಅವರು ತಿರುಗೇಟು ನೀಡಿದ್ದಾರೆ.

ವಿರೋಧಪಕ್ಷದವರು ಕೇಳಿದಾಗ ಲೆಲ್ಲ ಲೆಕ್ಕ ಕೊಡಬೇಕು ಎಂದು ಏನು ಇಲ್ಲ, ಎಂದು ಡಿಸಿಎಂ ಅಶ್ವಥ್ ನಾರಾಯಣ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ವಿರೋಧಪಕ್ಷದವರು ಮಾಡಿರುವ ಆರೋಪ ಎಲ್ಲಾ ನಿರಾಧಾರ ಸತ್ಯ ಅಂಶಕ್ಕೆ ದೂರವಾಗಿರುವುದು ಎಂದು ಅವರು ಹೇಳಿದರು. ವಿರೋಧ ಪಕ್ಷದವರ ಆರೋಪಕ್ಕೆ ವಿಧಾನ ಸಭೆಯಲ್ಲಿ ಉತ್ತರ ನೀಡಬಹುದಿತ್ತು ಎಂದರು.


Share