ಕರ್ನಾಟಕ ಚುನಾವಣೆ : ಚುನಾವಣಾ ಆಯೋಗ ವಶಪಡಿಸಿಕೊಂಡಿರುವ ಮೌಲ್ಯವೆಷ್ಟು ?

Share

ಕರ್ನಾಟಕದಲ್ಲಿ ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಾದ 11 ದಿನಗಳಲ್ಲಿ 108.78 ಕೋಟಿ ರೂಪಾಯಿ ಮೌಲ್ಯದ ನಗದು ಮತ್ತು ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ವಶಪಡಿಸಿಕೊಂಡ ವಸ್ತುಗಳಲ್ಲಿ ಲೆಕ್ಕಕ್ಕೆ ಸಿಗದ 37.24 ಕೋಟಿ ರೂಪಾಯಿ ನಗದು, 26.68 ಕೋಟಿ ರೂಪಾಯಿ ಮೌಲ್ಯದ 5.23 ಲಕ್ಷ ಲೀಟರ್ ಮದ್ಯ, 11.54 ಕೋಟಿ ರೂಪಾಯಿ ಮೌಲ್ಯದ 397 ಕೆಜಿ ಅಕ್ರಮ ಮಾದಕ ದ್ರವ್ಯ, 14.96 ಕೋಟಿ ರೂಪಾಯಿ ಮೌಲ್ಯದ 34.36 ಕೆಜಿ ಚಿನ್ನ ಮತ್ತು 15.80 ಕೋಟಿ ಮೌಲ್ಯದ ಉಚಿತ ವಸ್ತುಗಳು ಸೇರಿವೆ.
ಈ ಹಿಂದೆ 2018 ರ ವಿಧಾನಸಭೆ ಚುನಾವಣೆಗೆ ಮುನ್ನ ಅಷ್ಟೇ ದಿನಗಳಲ್ಲಿ (27 ಮಾರ್ಚ್ 2018 ರಿಂದ 9 ಏಪ್ರಿಲ್ 2018) 20.12 ಕೋಟಿ ಮೌಲ್ಯದ ನಗದು ಮತ್ತು ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಆಯೋಗ ತಿಳಿಸಿದೆ. ಈ ಬಾರಿ ಸುಮಾರು 440 ರಷ್ಟು ಹೆಚ್ಚು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

Share