ಕರ್ನಾಟಕ ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಪಟ್ಟಿ ಬಿಡುಗಡೆ

Share

ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ ಇಂದು ಶುಕ್ರವಾರ ಚುನಾವಣಾ ಪ್ರಚಾರ ಸಮಿತಿಯನ್ನು ಪ್ರಕಟಿಸಿದೆ. ಈ ತಂಡವು 25 ನಾಯಕರನ್ನು ಒಳಗೊಂಡಿದೆ, ಇದರಲ್ಲಿ ರಾಜ್ಯ ಸಚಿವರು, ಸಂಸದರು ಮತ್ತು ಆಡಳಿತಾರೂಢ ಬಿಜೆಪಿ ಪಕ್ಷದ ಕೇಂದ್ರ ಸಚಿವರು ಇದ್ದಾರೆ.
ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಹೆಸರಿಸಲಾಗಿದೆ ಮತ್ತು ಕರ್ನಾಟಕ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿಗಳಾದ ಸದಾನಂದ ಗೌಡ ಮತ್ತು ಜಗದೀಶ್ ಶೆಟ್ಟರ್ ಕೂಡ ಸಮಿತಿಯಲ್ಲಿದ್ದಾರೆ; ರಾಜ್ಯದ ಸಚಿವರಾದ ಕೆ ಸುಧಾಕರ್, ಅಶ್ವತ್ಥನಾರಾಯಣ, ಎಸ್ ಟಿ ಸೋಮಶೇಖರ್ ಅವರ ಹೆಸರುಗಳು ಪಟ್ಟಿಯಲ್ಲಿವೆ. ಇದೇ ವೇಳೆ, ಚುನಾವಣಾ ಪ್ರಚಾರದ ತಂಡದಲ್ಲಿ ಮಾಜಿ ಸಿಎಂ ಹಾಗೂ ಬಿಜೆಪಿಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ ಬಿವೈ ವಿಜಯೇಂದ್ರ ಕೂಡ ಸೇರ್ಪಡೆಯಾಗಿದ್ದಾರೆ. ಬಿಎಸ್ ಯಡಿಯೂರಪ್ಪ ಇತ್ತೀಚೆಗಷ್ಟೇ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದು, ಪಕ್ಷಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ಬಿಜೆಪಿ
ವಿಧಾನಸಭೆ ಚುನಾವಣೆ – 2023
ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರು ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಶ್ರೀ ಬಿ.ಎಸ್. ಯಡಿಯೂರಪ್ಪ, ಶ್ರೀ ನಳಿನ್‌ ಕುಮಾರ್ ಕಟೀಲ್, ಶ್ರೀ ಡಿ.ವಿ. ಸದಾನಂದ ಗೌಡ, ಶ್ರೀ ಜಗದೀಶ್ ಶೆಟ್ಟರ್, ಶ್ರೀ ಪ್ರಲ್ಲಾದ ಜೋಶಿ, ಕು, ಶೋಭಾ ಕರಂದ್ಲಾಜೆ, ಶ್ರೀ ಎ. ನಾರಾಯಣಸ್ವಾಮಿ, ಶ್ರೀ ಕೆ.ಎಸ್. ಈಶ್ವರಪ್ಪ, ಶ್ರೀ ಗೋವಿಂದ ಕಾರಜೋಳ, ಶ್ರೀ ಬಿ. ಶ್ರೀರಾಮುಲು, ಶ್ರೀ ಆರ್. ಅಶೋಕ್, ಶ್ರೀಮತಿ ಶಶಿಕಲಾ ಜೊಲ್ಲೆ, ಶ್ರೀ ಸಿ.ಸಿ. ಪಾಟೀಲ್, ಶ್ರೀ ಎಸ್.ಟಿ. ಸೋಮಶೇಖ‌ರ್ ಡಾ. ಕೆ. ಸುಧಾಕ‌ರ್ , ಶ್ರೀ ಪ್ರಭು ಚೌಹಾಣ್, ಡಾ. ಸಿ.ಎನ್‌. ಅಶ್ವಥ್‌ ನಾರಾಯಣ, ಶ್ರೀ ಸಿ.ಟಿ. ರವಿ, ಶ್ರೀ ವಿ. ಶ್ರೀನಿವಾಸಪ್ರಸಾದ್ , ಶ್ರೀ ಪಿ.ಸಿ. ಮೋಹನ್ , ಶ್ರೀ ಅರವಿಂದ ಲಿಂಬಾವಳಿ, ಶ್ರೀ ಲಕ್ಷ್ಮಣ ಸವದಿ,
ಶ್ರೀ ರಮೇಶ್ ಜಾರಕೀಹೊಳಿ , ಶ್ರೀ ಬಿ.ವೈ. ವಿಜಯೇಂದ್ರ,
ಶ್ರೀ ಛಲವಾದಿ ನಾರಾಯಣಸ್ವಾಮಿ ಎಂದು ಪಕ್ಷ ತೀರ್ಮಾನಿಸಿದೆ.
ವಿಧಾನಸಭೆ ಚುನಾವಣೆ – 2023 ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ :
ಕು. ಶೋಭಾ ಕರಂದ್ಲಾಜೆ,
ಶ್ರೀ ಭಗವಂತ ಖೂಬಾ, ಶ್ರೀ ಕೋಟಾ ಶ್ರೀನಿವಾಸ ಪೂಜಾರಿ, ಶ್ರೀ ಅರವಿಂದ ಲಿಂಬಾವಳಿ,
ಶ್ರೀ ರಘುನಾಥರಾವ ಮಲ್ಕಾಪುರೆ, ಶ್ರೀ ನಿರ್ಮಲ್‌ ಕುಮಾರ್ ಸುರಾಣ, ಶ್ರೀಮತಿ ತೇಜಸ್ವಿನಿ ಅನಂತಕುಮಾ‌ರ್ , ಶ್ರೀ ಎನ್‌. ರವಿಕುಮಾರ್, ಶ್ರೀ ಸಿದ್ದರಾಜು, ಶ್ರೀ ಅಶ್ವಥ್‌ನಾರಾಯಣ, ಶ್ರೀ ಮಹೇಶ್ ಟೆಂಗಿನಕಾಯಿ , ಶ್ರೀ ಎಸ್‌. ಕೇಶವ್ ಪ್ರಸಾದ್ , ಶ್ರೀ ಛಲವಾದಿ ನಾರಾಯಣಸ್ವಾಮಿ , ಶ್ರೀಮತಿ ಗೀತಾ ವಿವೇಕಾನಂದ ಒಳಪಟ್ಟಿದ್ದಾರೆ ಎಂದು ಕರ್ನಾಟಕ ಬಿಜೆಪಿ ಪಕ್ಷ ಅಧಿಕೃತವಾಗಿ ತಿಳಿಸಿದೆ.


Share