ಕಾಂಗ್ರೆಸ್ ಕಾರ್ಯಾದ್ಯಕ್ಷ ಧೃವನಾರಾಯಣ್ ಇನ್ನಿಲ್ಲ

Share

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧೃವ ನಾರಾಯಣ್ ಮೈಸೂರಿನಲ್ಲಿ ಇಂದು ಹೃದಯಘಾತದಿಂದ ವಿಧಿವಶರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ. ಇವರಿಗೆ 62 ವರ್ಷ ವಯಸ್ಸು. ಇಂದು ಬೆಳಿಗ್ಗೆ ಸುಮಾರು 6:00 ಗಂಟೆ ಸಮಯಕ್ಕೆ ಎದೆ ನೋವು ಕಾಣಿಸಿಕೊಂಡಿದೆ ಎಂದು ತಮ್ಮ ಚಾಲಕರಿಗೆ ಕರೆ ಮಾಡಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. 1983 ರಲ್ಲಿ ಇವರು ಕಾಂಗ್ರೆಸ್ ಪಕ್ಷ ಸೇರಿದ್ದರು. 2004ರ ಚುನಾವಣೆಯಲ್ಲಿ ಕೇವಲ ಒಂದು ಮತದಿಂದ ಇವರು ಗೆಲುವನ್ನು ಸಾಧಿಸಿದ್ದರು. ಈ ಬಾರಿ ಆರ್ ಧ್ರುವನಾರಾಯಣ್ ಅವರು ನಂಜನಗೂಡಿನಿಂದ ಸ್ಪರ್ಧಿಸುವ ಸಂಭವವಿತ್ತು. ಎರೆಡು ಬಾರಿ ಚಾಮರಾಜನಗರದ ಸಂಸದರಾಗಿ ಆಯ್ಕೆ ಆಗಿದ್ದರು.


Share