ಕಾನೂನು ತಜ್ಞ- ಸಿ ಕೆ ಎನ್ ರಾಜ ದೈವಾದೀನ

Share

ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಪ್ರಾಧ್ಯಾಪಕ, ಕಾನೂನು ವಿಭಾಗದ ಡೀನ್ ಡಾ.ಸಿ.ಕೆ.ಎನ್.ರಾಜ ಅವರು ಇಂದು ಮಧ್ಯಾಹ್ನ ಮೈಸೂರಿನಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ವಿಶ್ವವಿದ್ಯಾನಿಲಯದ ಖ್ಯಾತ ಕಾನೂನು ತಜ್ಞರಾದ 89 ವರ್ಷದ ಪ್ರೊ.ಸಿ.ಕೆ.ಎನ್.ರಾಜಾ ಅವರು ಸ್ವಲ್ಪ ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ಮೈಸೂರಿನ ಜೆ ಎಸ್ ಎಸ್ ಆಸ್ಪತ್ರೆಯಲ್ಲಿ ಮದ್ಯಾಹ್ನ ಕೊನೆಯುಸಿರೆಳೆದಿದ್ದಾರೆ.
ಅವರು ಭಾರತ ಹಾಗೂ ಅಮೆರಿಕ ಎರೆಡೂ ದೇಶದ ಸಂವಿಧಾನದಲ್ಲಿ ನಿಪುಣರಾಗಿದ್ದರು. ವಿಶಿಷ್ಟ ಭಾಷಣಕಾರರು, ಹಾಗೂ ಅನೇಕ ಪುಸ್ತಕಗಳನ್ನು ಬರೆದಿದ್ದರು. ಇವರು ಮೈಸೂರಿನ ಎನ್ಐಇ ಕಾಲೇಜಿನಲ್ಲಿ ಉಪಾಧ್ಯಕ್ಷರು ಹಾಗೂ ನಿರ್ದೇಶಕರಾಗಿ ಸೇವೆಸಲ್ಲಿಸಿದ್ದರು.
ಮೈಸೂರು ಪತ್ರಿಕೆ ಸಂಪಾದಕರಾಗಿದ್ದ ಲೇಟ್ ಟಿ. ವೆಂಕಟರಾಂ ರೊಂದಿಗೆ ನಿಕಟ ಸಂಬಂಧ ಹೊಂದಿದ್ದು ಬಹಳಷ್ಟು ಸಂದರ್ಭಗಳಲ್ಲಿ ಮೈಸೂರು ಪತ್ರಿಕೆಗೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದುದ್ದನ್ನು ಮೈಸೂರು ಪತ್ರಿಕೆಯು ಸ್ಮರಿಸುತ್ತದೆ.
ಈ ಸಂದರ್ಭದಲ್ಲಿ ಸಿ ಕೆ ಎನ್ ರಾಜ ಅವರ ಕುಟುಂಬಕ್ಕೆ ಈ ನಷ್ಟವನ್ನು ಸಹಿಸುವ ಧೈರ್ಯ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.

Share