ಕಾಯಕದ ಶ್ರೇಷ್ಠತೆ ಸಾರಿದ ಬಸವಣ್ಣ

246
Share

 

*ಕಾಯಕದ ಶ್ರೇಷ್ಠತೆ ಸಾರಿದ ಬಸವಣ್ಣ*

ಮೈಸೂರು:
‘ಸಮ ಸಮಾಜ ನಿರ್ಮಾಣದ ಕನಸು ಕಂಡು ಅದಕ್ಕಾಗಿ ಶ್ರಮಿಸಿದ ಬಸವಣ್ಣನವರು ಕಾಯಕವೇ ಪರಮಧರ್ಮವೆಂದು ಬೋಧಿಸಿ ಅದರ ಶ್ರೇಷ್ಠತೆ ಜಗತ್ತಿಗೆ ಸಾರಿದರು’ ಎಂದು ಜುಬಿಲಿಯಂಟ್ ಕಾರ್ಖಾನೆಯ ಮಾನವ ಸಂಪನ್ಮೂಲ ಇಲಾಖೆಯ ಎಚ್ ಆರ್ ಸುಬ್ರಹ್ಮಣ್ಯ ಹೇಳಿದರು.

ನಗರದ ಬೋಗಾದಿಯ ಮರಟಿಕ್ಯಾತ್ನಳ್ಳಿ ಜನಸೇವಕ ಯುವ ಬ್ರಿಗೇಡ್ ವತಿಯಿಂದ ವಿಶ್ವ ತಂತ್ರಜ್ಞಾನದ ದಿನ ಹಾಗೂ ಬಸವ ಜಯಂತಿಯ ಅಂಗವಾಗಿ
ಜುಬಿಲಿಯಂಟ್ ಕಾರ್ಖಾನೆಯ ಮಾನವ ಸಂಪನ್ಮೂಲ ಇಲಾಖೆಯ ಎಚ್ ಆರ್ ಸುಬ್ರಹ್ಮಣ್ಯ ರವರಿಗೆ ಸನ್ಮಾನಿಸಲಾಯಿತು ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು

12ನೇ ಶತಮಾನದಲ್ಲಿ ಅವರು ಸ್ಥಾಪನೆ ಮಾಡಿದ್ದ ಅನುಭವ ಮಂಟಪ ಎಲ್ಲ ಜಾತಿ ಜನಾಂಗದವರ ಪ್ರವೇಶಕ್ಕೆ ಸಮಾನ ಅವಕಾಶ ಕಲ್ಪಿಸಿತ್ತು. ಅಂದು ಶರಣರು ಬರೆದು ಚರ್ಚಿಸಿದ ವಚನಗಳು ಎಂದಿಗೂ ಪ್ರಸ್ತುತವಾಗಿರುತ್ತವೆ’ ಎಂದರು.

ಜನಸೇವಕ ಯುವ ಬ್ರಿಗೇಡ್ ಅಧ್ಯಕ್ಷರಾದ ರಾಘವೇಂದ್ರ ಡಿ ಮಾತನಾಡಿ, ‘ಬಸವಣ್ಣವರ ವಚನ ಸಾಹಿತ್ಯ ಅತ್ಯಂತ ಸರಳವಾಗಿದ್ದು ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ನಮ್ಮ ಜೀವನ ಸಾರ್ಥಕವಾಗುವುದು’ ಎಂದರು

ಇದೇ ಸಂದರ್ಭದಲ್ಲಿ ಜನಸೇವಕ ಯುವ ಬ್ರಿಗೇಡ್ ಅಧ್ಯಕ್ಷರು ರಾಘವೇಂದ್ರ ಡಿ, ಪ್ರದೀಪ್ ಕುಮಾರ್. ಮಂಜು. ಜೂಲಿಯಂಟ್ ನೆಸ್ಲೆ ಕಾರ್ಖಾನೆಯ ಮಾನವ ಸಂಪನ್ಮೂಲ ಇಲಾಖೆ ನಿತಿನ್, ಕಾರ್ಖಾನೆಯ ಇಂಜಿನಿಯರಿಂಗ್ ವಿಭಾಗದ ರಾಘವೇಂದ್ರ, ಮಹೇಶ್ ಕುಮಾರ್, ಪರಮೇಶ್,ವಿಭಾಗದ ಪ್ರಶಾಂತ್,ಜ್ಯೋತಿ, ಅನಿತಾ,ದೀಪಕ್,ನಿತಿನ್, ಆದರ್ಶ್, ಸಂತೋಷ್, ರಾಚಪ್ಪ,ಹನುಮಂತಪ್ಪ, ಜಯಶ್ರೀ,ಮೂರ್ತಿ, ಮಹದೇವ್ ಹಾಗೂ ಇನ್ನಿತರರು ಭಾಗವಹಿಸಿದರು

 


Share