ಕಾರ್ಮಿಕ ಸಮಾಜದ ರಾಜ್ಯಾಧ್ಯಕ್ಷರಾದ ಡಿ.ಆರ್. ರಾಜು ರವರನ್ನು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡುಂತೆ ಒತ್ತಾಯ*

 

*ಪೌರ ಕಾರ್ಮಿಕ ಸಮಾಜದ ರಾಜ್ಯಾಧ್ಯಕ್ಷರಾದ ಡಿ.ಆರ್. ರಾಜು ರವರನ್ನು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡುಂತೆ ಒತ್ತಾಯ*

ಪೌರ ಕಾರ್ಮಿಕ ಸಮಾಜದ ರಾಜ್ಯಾಧ್ಯಕ್ಷರಾದ ಡಿ.ಆರ್. ರಾಜು ರವರನ್ನು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಮೈಸೂರು ನಗರ ಪಾಲಿಕೆ ಖಾಯಂ ಪೌರಕಾರ್ಮಿಕರ ಹಾಗೂ ಗುತ್ತಿಗೆ ಪೌರಕಾರ್ಮಿಕರ‌ ಮಹಾಸಂಘದ ಪದಾಧಿಕಾರಿಗಳು ಒತ್ತಾಯಿಸಿದರು

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಎನ್ ಮಾರ ಮಾತನಾಡಿ
ಹಿಂದುಳಿದ ವರ್ಗಗಳ ನೇಕಾರ ಜನಪ್ರಿಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರುಗಳಾದ ಡಾ. ಹೆಚ್.ಸಿ. ಮಹದೇವಪ್ಪ ರವರಲ್ಲಿ ಒತ್ತಾಯ ಮಾಡುವುದೇನೆಂದರೆ, ಕರ್ನಾಟದಲ್ಲಿ ಪರಿಶಿಷ್ಟ ಜಾತಿಯ ಕನ್ನಡ ಮಾದಿಗ, ಬೆಂಗಳೂರು ಮಾದಿಗ, ಜೋಗಿ ಮಾದಿಗ ಈ ಸಮಾಜಗಳಿಗೆ ಅಧ್ಯಕ್ಷ ಸ್ಥಾನಮಾನವನ್ನು ನೀಡಿದ್ದು, ಇದುವರೆವಿಗೂ ನಮ್ಮ ಆದಿ ದ್ರಾವಿಡ ಮಾದಿಗ ಸಮಾಜಕ್ಕೆ ಇದುವರೆವಿಗೂ ಯಾವುದೇ ನಿಗಮ ಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನಮಾನವನ್ನು ನೀಡಿರುವುದಿಲ್ಲ, ನಮ್ಮ ಸಮಾಜವು ಕರ್ನಾಟಕ ರಾಜ್ಯದಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನ ಸಂಖ್ಯೆ ಇರುತ್ತದೆ. ನಮ್ಮ ನಾಯಕರಾದ ಡಿ.ಆರ್. ರಾಜು ರವರು ಕಾಂಗ್ರೆಸ್ ಪಕ್ಷದ ಸಕ್ರೀಯ ಕಾರ್ಯಕರ್ತರಾಗಿ ಸುಮಾರು 30 ವರ್ಷಗಳಿಂದ ಪಕ್ಷ ಸಂಘಟನೆ ಮಾಡಿ ಎಲ್ಲಾ ಜಿಲ್ಲೆಗಳಲ್ಲಿ ಪೌರ ಕಾರ್ಮಿಕ ಸಮಾಜದ ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಬರುವ ರೀತಿಯಲ್ಲಿ ಶ್ರಮ ವಹಿಸಿರುತ್ತಾರೆ. ಡಿ.ಆರ್. ರಾಜು ರವರು ನಗರಸಭಾ ಸದಸ್ಯರಾಗಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ರಾಜ್ಯ ಸದಸ್ಯರಾಗಿ ಕೆ.ಪಿ.ಸಿ.ಸಿ. ಪ್ರದೇಶ ಕಾಂಗ್ರೆಸ್ ಸಮಿತಿ ಸಂಚಾಲಕರಾಗಿ ಆದಿ ದ್ರಾವಿಡ ಸಮಾಜದ ರಾಜ್ಯಾಕ್ಷರಾಗಿ ಪ್ರಸ್ತುತ ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಮಹಾ ಸಂಘದ ರಾಜ್ಯಾಕ್ಷರಾಗಿ ಸಮಾಜದ ಸೇವೆ ಮಾಡುತ್ತಿರುವ ಇವರನ್ನು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗಅಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಮಾನ್ಯ ಮುಖ್ಯ ಮಂತ್ರಿಗಳನ್ನು ಹಾಗೂ ಉಸ್ತುವಾರಿ ಸಚಿವರನ್ನು ಮೈಸೂರು ಮಹಾನಗರ ಪಾಲಿಕೆ ಖಾಯಂ ಹಾಗೂ ಗುತ್ತಿಗೆ ಪೌರ ಕಾರ್ಮಿಕರ ಮಹಾಸಂಘ, ಡಾ.ಬಿ.ಆರ್. ಅಂಬೇಡ್ಕರ್ ಆದಿ ದ್ರಾವಿಡ ಯುವಕರ ಅಭಿವೃದ್ಧಿ ಮಹಾಸಂಘ ಹಾಗೂ ಅಖಿಲ ಕರ್ನಾಟಕ ಆದಿ ದ್ರಾವಿಡ ಪೌರ ಕಾರ್ಮಿಕರ ಜನಾಂಗದ ಅಭಿವೃದ್ಧಿ ಟ್ರಸ್ಟಿನ ವತಿಯಿಂದ ಜಂಟಿಯಾಗಿ ಪತ್ರಿಕಾಗೋಷ್ಠಿ ಮೂಲಕ ಸರ್ಕಾರವನ್ನು ಒತ್ತಾಯ ಮಾಡುತ್ತಿದ್ದೇವೆ ಎಂದು ತಿಳಿಸಿದರು

ಸುದ್ದಿಗೋಷ್ಟಿಯಲ್ಲಿ ಶ್ರೀನಿವಾಸ್, ಬ್ಯಾಂಕ್ ರಂಗಣ್ಣ , ಮಂಚಯ್ಯ, ಕ್ಯಾಪ್ಟನ್ ಶ್ರೀನಿವಾಸ್, ನರಸಿಂಹ ಸೇರಿದಂತೆ ಹಲವರು ಉಪಸ್ಥಿತರಿದ್ದರು