ಕಾವೇರಿ: ತುಂಬಿ ಹರಿಯಲು ಪ್ರಾರಂಭ, ಪ್ರವಾಸಿಗರಿಗೆ ಇಲ್ಲ ನೋಡುವ ಪುಣ್ಯ / ಭಾಗ್ಯ

ಕೆ.ಆರ್.ನಗರ : ಕೊಡಗಿನಲ್ಲಿ ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ವಾರದಿಂದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿಗೆ ಸುಮಾರು 10 ರಿಂದ 12 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ಕೆ.ಆರ್.ಎಸ್. ಜಲಾಶಯ 100 ಅಡಿ ದಾಟಿದ್ದು, ತಾಲೂಕಿನ‌ ಚುಂಚನಕಟ್ಟೆಯ ಜಲಪಾತದಲ್ಲಿ ಬೊರ್ಗೆರೆದು ಧುಮಕುತ್ತಿದೆ ಕಾವೇರಿ ನದಿ ನೀರು. ಕೋರೋನ ವೈರಸಗ ಹಿನ್ನೆಲೆಯಲ್ಲಿ ಪ್ರವಾಸಿಗರು ಇಲ್ಲದೆ ಬಣಗುಡುತ್ತಿದೆ ಚುಂಚನಕಟ್ಟೆ, ಹಾಗೂ ಶ್ರೀರಾಮ ದೇವಾಲಯ. ಮಾಚಿ ಸಚಿವ ಶಾಸಕ ಸಾ.ರಾ.ಮಹೇಶ್ ಅವರು ಪ್ರವಾಸೋದ್ಯಮ ಸಚಿವರಾಗಿದ್ದ ವೇಳೆ ಸುಮಾರು 10 ಕೋಟಿ‌ ವೆಚ್ಚದಲ್ಲಿ ಚುಂಚನಕಟ್ಟೆ ಪ್ರವಾಸಿ ತಾಣವನ್ನಾಗಿ ಮಾಡಲು ಕಾಮಗಾರಿ ಪ್ರಾರಂಭಿಸಿದ್ದರು. ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು‌ನೋಡುಗರ ಮನಸೂರೆಗೊಳ್ಳುವಂತೆ ಆಕರ್ಷಕವಾಗಿ ವಿನ್ಯಾಸಗೊಳಿಸಲಾಗುತ್ತಿದೆ.