ಕಾಶಿ ವಿಶ್ವನಾಥ ದೇವಾಲಯ : ಈ ವರ್ಷ ದಾಖಲೆ ಆದಾಯ

269
Share

ವಾರಣಾಸಿ: ಕಾಶಿ ವಿಶ್ವನಾಥ ದೇವಸ್ಥಾನವು ದೂರದೂರುಗಳಿಂದ ಭಕ್ತರನ್ನು ಆಕರ್ಷಿಸುತ್ತಿರುವುದರಿಂದ, ಉದಾರ ದೇಣಿಗೆ ನೀಡುತ್ತ ಇರುವುದರಿಂದ 2023-24ನೇ ಹಣಕಾಸು ವರ್ಷದಲ್ಲಿ ದೇವಸ್ಥಾನವು 83.34 ಕೋಟಿ ರೂ ಸಂಗ್ರಹಿಸಿದೆ. 2022-23 ರ ಸಂಗ್ರಹಣೆಗಳಿಗೆ ಹೋಲಿಸಿದರೆ 42.43% ರಷ್ಟು ಜಿಗಿತವನ್ನು ದಾಖಲಿಸಿದೆ.
ಮಾರ್ಚ್‌ನಲ್ಲಿ ರೂ 11.14 ಕೋಟಿ ಆದಾಯವು ದೇವಾಲಯದಲ್ಲಿ ಸಂಗ್ರಹವಾದ ತಿಂಗಳ ಗರಿಷ್ಠ ಸಂಗ್ರಹವಾಗಿದೆ.
ಮಾದ್ಯಮ ಒಂದಕ್ಕೆ ಮಾತನಾಡಿದ ದೇವಾಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವ ಭೂಷಣ್, “ಶ್ರೀ ಕಾಶಿ ವಿಶ್ವನಾಥ ದೇವಾಲಯ ಟ್ರಸ್ಟ್ (SKVTT) 2023-24 ಹಣಕಾಸು ವರ್ಷದಲ್ಲಿ ತನ್ನ ಅತ್ಯಧಿಕ ಸಂಗ್ರಹಣೆ ಮತ್ತು ವೆಚ್ಚವನ್ನು ದಾಖಲಿಸಿದೆ. ಆದಾಯದ ಭಾಗದಲ್ಲಿ, ಅದರ ಒಟ್ಟು ಗಳಿಕೆಯು ರೂ 83.34 ಕೋಟಿ ಆಗಿದೆ. ಇದು 2022-23 ರ ಒಟ್ಟು ಗಳಿಕೆಗಿಂತ 42.43% ಹೆಚ್ಚಾಗಿದೆ.
ವೆಚ್ಚವು 25.32 ಕೋಟಿ ರೂ.ಗಳಾಗಿದ್ದು, ಇದು ಹಿಂದಿನ ಹಣಕಾಸು ವರ್ಷದ ಅಂಕಿಅಂಶಗಳಿಗಿಂತ 40.38% ಹೆಚ್ಚಾಗಿದೆ.
ದೇಣಿಗೆಯಾಗಿ ಪಡೆದ ಅಮೂಲ್ಯ ಲೋಹಗಳ ಮೌಲ್ಯವನ್ನು ಅದರಲ್ಲಿ ಸೇರಿಸದಿದ್ದರೂ ಸಹ ದೇವಾಲಯಕ್ಕೆ ಫೆಬ್ರುವರಿ ಅಂತ್ಯದವರೆಗೆ 69.92 ಕೋಟಿ ರೂ.ಗಳ ಸಂಗ್ರಹ ಹಿಂದಿನ ಎಲ್ಲಾ ಆದಾಯದ ದಾಖಲೆಗಳನ್ನು ಮುರಿದಿವೆ. 2022-23 ರಲ್ಲಿ, ದೇವಾಲಯವು 58.51 ಕೋಟಿ ರೂಪಾಯಿ ಆದಾಯವನ್ನು ದಾಖಲಿಸಿದ್ದರೆ, 2018-19 ಮತ್ತು 2019-20 ರ ಆರ್ಥಿಕ ವರ್ಷಗಳಲ್ಲಿ 26 ಕೋಟಿ ರೂ ಆದಾಯ ಸಂಗ್ರಹವಾಗಿತ್ತು ಎಂದು ಮೂಲಗಳು ತಿಳಿಸಿವೆ.


Share