ಕೆಂಪೇಗೌಡರ ಜಯಂತಿ, ರಕ್ತದಾನ ಶಿಬಿರ.

ಅಪೂರ್ವ ಸ್ನೇಹ ಬಳಗ ಹಾಗೂ ಜೀವಧಾರ ರಕ್ತನಿಧಿಯ ಸಹಯೋಗದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿಯ ಅಂಗವಾಗಿ ಚಾಮುಂಡಿಪುರಂ ಬಡಾವಣೆಯಲ್ಲಿರುವ ಅಪೂರ್ವ ಸಭಾಂಗಣದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು, 50ಕ್ಕೂ ಹೆಚ್ವು ಮಂದಿ ಯುವಕರು ರಕ್ತದಾನ ಮಾಡಿದರು, ಇದೇ ಸಂಧರ್ಭದಲ್ಲಿ ಕೃಷ್ಣರಾಜ ಕ್ಷೇತ್ರದ ಶಾಸಕರಾದ ಎಸ್.ಎ ರಾಮಾದಾಸ್ ರವರು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು ನಂತರ ಶಾಸಕರಾದ ಎಸ್.ಎ ರಾಮದಾಸ್ ರವರು ಮಾತನಾಡಿ ಕೊರೋನಾ ಲಾಕ್ ಡೌನ್ ಸಂಕಷ್ಟದಲ್ಲಿ ರಕ್ತನಿಧಿ ಸಂಖ್ಯೆ ಕುಸಿಯುತ್ತಿರುವ ಹಿನ್ನಲೆಯಲ್ಲಿ ಮಾನವೀಯತೆ ದೃಷ್ಟಿಯಿಂದ ಯುವಸಮೂಹ ರಕ್ತದಾನ ಮಾಡುವ ಮೂಲಕ ಇನ್ನೊಬ್ಬರ ಜೀವರಕ್ಷಣೆಗೆ ಆಸರೆಯಾಗುತ್ತಿರುವುದು ಶ್ಲಾಘನೀಯ, ರಕ್ತದಾನ ಮಾಡಿದರೆ ಹೃದಯ ಸಂಭಂದಿ ಕಾಯಿಲೆಗಳು ಬರುವುದಿಲ್ಲ ಉಸಿರಾಟ ಶ್ವಾಸಕೋಶ ಶಕ್ತಿ ವೃದ್ಧಿಯಾಗುತ್ತದೆ ಆರೋಗ್ಯವಾಗಿ ಜೀವಿಸಬಹುದು, ಮನೆಗೊಬ್ಬ ರಕ್ತದಾನಿ ಮುಂದಾದರೆ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ ಎಂದರು, ನಂತರ ಹೊಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣ ಗೌಡ ರವರು ಮಾತನಾಡಿ ಕರ್ನಾಟಕದ ರಾಜಧಾನಿ ಬೆಂಗಳೂರು ವಿಶಾಲವಾಗಿ ಬೆಳೆಯಲು ತಳಹದಿ ಹಾಕಿದವರೇ ಕೆಂಪೇಗೌಡರು. ಇವರ ಆಡಳಿತದ ಅವಧಿಯಲ್ಲಿ ನೂರಾರು ಕೆರೆ ಕಟ್ಟೆಗಳು ಗುಡಿ ಗೋಪುರಗಳು ಅಗ್ರಹಾರ ನಿರ್ಮಿಸಿದ್ದಾರೆ, ವ್ಯವಸ್ಥಿತವಾದ ಮಾರುಕಟ್ಟೆಗಳು ನಿರ್ಮಾಣಗೊಂಡಿವೆ. ಅವರ ತತ್ವ ಮತ್ತು ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು. ನಂತರ ಹಿರಿಯ ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ರವರು ಮಾತನಾಡಿ ಇಂದಿನ ಬೆಂಗಳೂರು ದೇಶ ವಿದೇಶಿಗರಿಗೆ ರಸ್ತೆಬದಿಯಿಂದ ಮಾಲ್ ವರೆಗೂ ಆಶ್ರಯ ನೀಡಿದೆ ಎಂದರೆ ಸುಮಾರು 500 ವರ್ಷಗಳ ಹಿಂದೆ ಬೆಂಗಳೂರನ್ನು ನಿರ್ಮಿಸಿದ ಕೆಂಪೆಗೌಡರು ಶ್ರಮ ಹಾಗೂ ಕೊಡುಗೆ ಅಪಾರ, ಒಂದು ಕೆರೆಯಿಂದ ಇನ್ನೊಂದು ಕೆರೆಗೆ ನೀರು ಹರಿಯುವಂತೆ ರಾಜಕಾಲುವೆಗಳನ್ನು ನಿರ್ಮಿಸಿದ್ದರು, ಕನ್ನಡ ಭಾಷಾ ಮತ್ತು ಸ್ವದೇಶಿ ಉತ್ಪನ್ನ ರೈತಾಪಿ ಪ್ರಧಾನಕ್ಕೆ ಪ್ರೋತ್ಸಾಹ ನೀಡಿದ್ದವರು ಕೆಂಪೆಗೌಡರು ಎಂದರು
ಮಾಜಿ ಸಚಿವರು ಹಾಗೂ ಶಾಸಕರಾದ ಎಸ್ ಎ ರಾಮದಾಸ್ ,ಹಿರಿಯ ಸಮಾಜ ಸೇವಕರಾದ ರಘುರಾಂ ವಾಜಪೇಯಿ ,ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣ ಗೌಡ ,ಜೀವಧಾರ ರಕ್ತನಿಧಿ ಕೇಂದ್ರ ನಿರ್ದೇಶಕರಾದ ಗಿರೀಶ್ ,ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್ ,ಯುವ ಮುಖಂಡರಾದ ವಿಕ್ರಂ ಅಯ್ಯಂಗಾರ್ ,ಅಜಯ್ ಶಾಸ್ತ್ರಿ, ಕೃಷ್ಣರಾಜ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ,ಕೇಬಲ್ ಮಹೇಶ್, ಲಕ್ಷ್ಮೀದೇವಿ, ನರಸಿಂಹರಾಜ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಲೋಹಿತ್ ,ಕಾರ್ತಿಕ್ ನಾಯಕ್ ,ಡಾ॥ಅವಿನಾಶ್ ,ಡಾ॥ ಮಹಾಂತೇಶ್ ,ನವೀನ್ ,ಸುಧೀಂದ್ರ, ನಾಗಶ್ರೀ ,ಹಾಗೂ ಇನ್ನಿತರರು ಹಾಜರಿದ್ದರು