ಪಾತಿ ಸ್ನೇಹ ಬಳಗ ವತಿಯಿಂದ ದಿನಾಂಕ 15-05-2020 ರ ಶುಕ್ರವಾರ ಬೆಳಗ್ಗೆ ಹನ್ನೊಂದು ಗಂಟೆಗೆ ನಗರದ ಕೆ ಆರ್ ಆಸ್ಪತ್ರೆ ಯ ಶವಾಗಾರದ ಮುಂದೆ ಶವಾಗಾರದ ಸಿಬ್ಬಂದಿಗಳು ಹಾಗೂ ಹರಿಶ್ಚಂದ್ರ ಘಾಟ್ ನಲ್ಲಿ ಶವ ಸಂಸ್ಕಾರ ಮಾಡುವ ನೌಕರರನ್ನು ಅಭಿನಂದಿಸಿ , ಅವರಿಗೆ ದಿನಸಿ ಕಿಟ್ ನ್ನು ವಿತರಣೆ ಮಾಡಲಾಯಿತು…ಈ ಕಾರ್ಯಕ್ರಮವನ್ನು ಪಾತಿ ಸ್ನೇಹ ಬಳಗದವರು ಪಾತಿ ಫೌಂಡೇಷನ್ ಸಂಸ್ಥೆ ಅಧ್ಯಕ್ಷರಾದ ಶ್ರೀ ಎಂ.ಡಿ.ಪಾರ್ಥಸಾರಥಿ (ಪಾತಿ) ರವರ ಜನ್ಮ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದರು….ಸದರಿ ಕಾರ್ಯಕ್ರಮದಲ್ಲಿ ಸನ್ಮಾನ್ಯ ಪಾತಿ ರವರು ಶವಾಗಾರದಲ್ಲಿ ಶವ ಕುಯ್ಯುವ ಮತ್ತು ಶವ ಹೊರುವ , ಇನ್ನಿತರೆ ಕೆಲಸ ಮಾಡುವ ಇಪ್ಪತ್ತಾರು ನೌಕರರನ್ನು ಹಾಗೂ ಹರಿಶ್ಚಂದ್ರ ಘಾಟ್ ನಲ್ಲಿ ಶವ ಸುಡುವ, ಶವ ಹೂಳುವ ಇತ್ಯಾದಿ ಕೆಲಸಗಳನ್ನು ಮಾಡುವ ಇಪ್ಪತ್ತು ಮಂದಿ ಸೇರಿ ಒಟ್ಟು ನಲವತ್ತಾರು ಜನರಿಗೆ ಹೂಗುಚ್ಛ ನೀಡಿ , ಅವರಿಗೆ ದಿನಸಿ ಕಿಟ್ ನ್ನು ನೀಡಿದರು.,.
ಸದರಿ ಸಂದರ್ಭದಲ್ಲಿ ಕಾರ್ಯಕ್ರಮವನ್ನು ದ್ದೇಶಿಸಿ ಮಾತನಾಡಿದ ಎಂ. ಡಿ. ಪಾರ್ಥಸಾರಥಿ ರವರು , ಸಮಾಜದಲ್ಲಿ ಯಾವಾಗಲೂ ಅಸ್ಪೃಶ್ಯತೆಗೊಳಗಾದ , ಎಲ್ಲರಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿರುವ , ಜನರು ಹೆಚ್ಚಾಗಿ ಬೆರೆಯಲು ಹಿಂಜರಿಯುವ ನೌಕರವರ್ಗ ಎಂದರೇ ಇವರೇ.. ಇಂತಹವರು ಮಾಡುವ ಕಾರ್ಯಕ್ಕೆ ಬೆಲೆ ಕಟ್ಟಲಾಗುವುದಿಲ್ಲ…ಜನ ಜೀವನ ಸಹಜ ಸ್ಥಿತಿಯಲ್ಲಿದ್ದಾಗಲೇ ಜಾತಿ ಮತ ಭೇದವಿಲ್ಲದೆ ಎಲ್ಲರಿಗೂ ಮುಕ್ತಿ ದೊರಕಿಸುವಂತಹ ಪವಿತ್ರ ಕಾರ್ಯ ಮಾಡುತ್ತಿರುವ ಇವರು , ಈ ಕೊರೋನಾ ದಂತಹ ಸಾಂಕ್ರಾಮಿಕ ರೋಗಗಳು ಹರಡಿರುವಾಗಲೂ ಜೀವದ ಹಂಗು ತೊರೆದು ಅದೇ ಸೇವಾ ಮನೋಭಾವ ತೋರುತ್ತಿರುವ ಇವರನ್ನು ಎಷ್ಟು ಕೊಂಡಾಡಿದರೂ ಸಾಲದು… ಸಾಮಾನ್ಯವಾಗಿ ಜನ್ಮ ದಿನಾಚರಣೆ ಮಾಡಿಕೊಳ್ಳದ ನಾನು , ಈ ಬಾರಿ ಇವರೊಂದಿಗೆ ಇವರ ಅಗಾಧ ಪ್ರಮಾಣದ ಸೇವೆಗೆ ಪ್ರತಿಯಾಗಿ ತೃಣ ಮಾತ್ರದ ಸಹಾಯ ಮಾಡುವ ಮೂಲಕ ತಮ್ಮ ಜನ್ಮ ದಿನದ ಸಾರ್ಥಕತೆ ಅನುಭವಿಸುತ್ತಿರುವುದಾಗಿ ತಿಳಿಸಿದರು…. ಯಾವುದೇ ಆಡಂಬರ ಇಲ್ಲದೆ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಆಸ್ಪತ್ರೆ ಆವರಣದ ಹಾಗೂ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳು, ಮತ್ತು ಪಾತಿ ಸ್ನೇಹ ಬಳಗದ ಸದಸ್ಯರು ಹರೀಶ್ ನಾಯ್ಡು, ಸಂತೋಷ್ ಸಿ ಎಂ, ಉಮೇಶ್ ,ಮಹದೇವ್ ಧನರಾಜ್ ಮತ್ತು ವಿಷ್ಣು ಅಭಿಮಾನಿ ಸದಸ್ಯರು ಏರ್ಟೆಲ್ ಮಂಜು ,ಸಂತೋಷ್ ಕುಮಾರ್ ನವೀನ್ ಟೈಲರ್ ಭಾಗಿಯಾಗಿದ್ದರು….