ಕೆಆರ್ ಎಸ್ ನಲ್ಲಿ ವಿಶ್ವೇಶ್ವರ ಪ್ರತಿಮೆ ಅನಾವರಣಕ್ಕೆ ವಿರೋಧ

352
Share

ಮೈಸೂರು ಕೆಆರ್ ಎಸ್ ನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಪ್ರತಿಮೆ ಜೊತೆ ವಿಶ್ವೇಶ್ವರಯ್ಯ ಅವರ ಪ್ರತಿಮೆ ಹಾಕುತ್ತೇವೆ ಎಂದು ಜಲಸಂಪನ್ಮೂಲ ಸಚಿವರ ಹೇಳಿಕೆ ಸಂಬಂಧ ನಗರದಲ್ಲಿ ಇತಿಹಾಸಕಾರರಿಂದ ಸಭೆ ನಡೆದು ಅವರ ಪ್ರತಿಮೆ ಅನಾವರಣಕ್ಕೆ ವಿರೋಧ ವ್ಯಕ್ತವಾಗಿದೆ ಎಂದು ಹೇಳಲಾಗಿದೆ
ಮೊನ್ನೆ ನೀರಾವರಿ ಸಚಿವರು ಕೃಷ್ಣರಾಜ ಜಲಾಶಯ ಅಣೆಕಟ್ಟಿನಲ್ಲಿ ೮:೩೦ ಕೋಟಿ ವೆಚ್ಚದಲ್ಲಿ ನಾಲ್ವಡಿ ಅವರ ಪ್ರತಿಮೆ ಜೊತೆ ವಿಶ್ವೇಶ್ವರಯ್ಯ ಅವರ ಪ್ರತಿಮೆ ಕೂಡ ಹಾಕುತ್ತೇವೆಂದು ನೀಡಿರುವ ಹೇಳಿಕೆಗೆ ವಿರೋಧ ವ್ಯಕ್ತವಾಯಿತು ನಾವು ವಿಶ್ವೇಶ್ವರಯ್ಯ ಅವರ ವಿರೋಧಿಗಳೇನು ಅಲ್ಲ ಆದರೆ ನಾಲ್ವಡಿ ಅವರು ಜನರಿಗೆ ಕೊಟ್ಟಿರುವ ಕೊಡುಗೆ ಅಪಾರ ಅಣೆಕಟ್ಟು ನಿರ್ಮಾಣ ಮಾಡಲು ಆಗುವ ವೆಚ್ಚ ಸುಮಾರು ಎರಡು ಕೋಟಿಗೂ ಮೀರಿ ಇದನ್ನು ಹೇಗೆ ಭರಿಸುವುದು ಎಂಬ ಚಿಂತೆ ಆದಾಗ ನಾಲ್ವಡಿ ಅವರ ತಾಯಿ ರಾಜಮಾತೆ ವಾಣಿವಿಲಾಸ ಸನ್ನಿಧಾನ ಅವರು ತಿಜೋರಿಯಲ್ಲಿದ್ದ ಒಡವೆಗಳನ್ನು ನಾಲ್ವಡಿ ಅವರಿಗೆ ಕೊಡುತ್ತಾರೆ ಇದನ್ನು ಮಾರಿ ನಂತರ ಬಂದ ಹಣದಲ್ಲಿ ಕೆ.ಅರ್.ಎಸ್ ಅಣೆಕಟ್ಟು ನಿರ್ಮಾಣ ಅಗಲು ಶುರುಮಾಡುತ್ತಾರೆ ನಾಲ್ವಡಿ ಅವರ ಸಮನಾಗಿ ಸರ್.ಎಂ. ವಿ ಅವರ ಪ್ರತಿಮೆ ನಿಲ್ಲಿಸುವುದಕ್ಕೆ ವಿರೋಧವಿದೆ ಎಂಬ ಅಭಿಪ್ರಾಯ ಬಂದಿದೆ
ಮಂಡ್ಯ ಭಾಗದಲ್ಲಿ ಹೋರಾಗಾರರೂ ಕೂಡ ಇದಕ್ಕೆ ಬೆಂಬಲ ನೀಡುತ್ತಿದ್ದು ಸಿ‌ಎಂ ಅವರನ್ನು ಬೇಟಿ ಮಾಡುವುದಾಗಿ ಸಭೆಯಲ್ಲಿ ತಿಳಿಸಿದರು

ಈ ಸಭೆಯಲ್ಲಿ ನಂಜರಾಜೇ ಅರಸ್ , ಶಭೀರ್ ಮುಸ್ತಫಾ , ಬೋವಿ ಸಮುದಾಯದ ಅಧ್ಯಕ್ಷರು ಸೀತಾರಾಮ್ ,
ಹೊಸಕೋಟೆ ಬಸವರಾಜು
, ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಅರವಿಂದ್ ಶರ್ಮ ,
ಸೋಸಲೆ ಸಿದ್ದರಾಜು , ನಂದೀಶ್ ಅರಸ್ , ದಲಿತ ಸಂಘರ್ಷ ಸಮಿತಿಯ ಚೋರನಹಳ್ಳಿ ಶಿವಣ್ಣ ,
ಶ್ರೀಮತಿ ಯಮುನಾ , ವಿಜಯದೇವರಾಜ ಅರಸ್ , ಚಾಮುಂಡಪ್ಪ , ಎಂ.ಪೃತ್ವಿರಾಜ್ , ಎಂ‌ ಎಸ್ ಅಶ್ವತ್ಥ ನಾರಾಯಣ , ಜಿ ನಾಗರಾಜು , ಕೆ.ವಿ ದೇವೆಂದ್ರ ಮುಂತಾದವರು ಉಪಸ್ಥಿತಿತರಿದ್ದರು


Share