ಕೆಆರ್ ಕ್ಷೇತ್ರದಲ್ಲಿ ಕಾಮಗಾರಿಗೆ ಶಾಸಕರಿಂದ ಗುದ್ದಲಿ ಪೂಜೆ

ಕೃಷ್ಣರಾಜ ಕ್ಷೇತ್ರದ ವಾರ್ಡ್ ನಂ 49 ರಲ್ಲಿ ಒಟ್ಟು 45 ಲಕ್ಷ ರೂಪಾಯಿಗಳ ಕಾಮಗಾರಿಗೆ ಚಾಲನೆ
ಇಂದು ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಗೆ ಬರುವ ವಾರ್ಡ್ 49 ರ ಲಕ್ಷ್ಮಿಪುರಂ ಭಾಗದ 25 ಲಕ್ಷ ರೂಪಾಯಿಗಳ ವೆಚ್ಛದಲ್ಲಿ ಬಸವೇಶ್ವರ ರಸ್ತೆಯ 10 ಮತ್ತು 11ನೇ ಕ್ರಾಸ್ ಮತ್ತು ಚಾಮರಾಜಪುರಂನಲ್ಲಿ 20 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ವಿಷ್ಣುವರ್ಧನ್ ರಸ್ತೆ ಮತ್ತು ಮಹೇಶ್ ಪ್ರಸಾದ್ ಹೋಟೆಲ್ ಹಿಂಭಾಗದ ಗಲ್ಲಿಗಳಿಗೆ ಕನ್ಸರ್ ವೆನ್ಸಿ ಗಲ್ಲಿಗಳಿಗೆ ಇಂಟರ್ ಲಾಕಿಂಗ್ ಕಾಮಗಾರಿಗೆ ಮಾನ್ಯ ಶಾಸಕರಾದ ಎಸ್ ಎ ರಾಮದಾಸ್ ರವರು ಇಂದು ಗುದ್ದಲಿ ಪೂಜೆ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ಥಳೀಯ ನಿವಾಸಿಗಳು ಬಹಳ ದಿನಗಳಿಂದ ಬೇಡಿಕೆಯಿದ್ದ ಈ ಸಮಸ್ಯೆಯನ್ನು ಮಾನ್ಯ ಶಾಸಕರು ಹಾಗು ನಗರ ಪಾಲಿಕೆ ಸದಸ್ಯರು ಬಗೆಹರಿಸುವಲ್ಲಿ ಸಕರಾತ್ಮಕವಾಗಿ ಸ್ಪಂದಿಸಿದ ಕಾರಣ ಇಂದು ಕಾಮಗಾರಿಗೆ ಚಾಲನೆಯಾಗಿರುತ್ತದೆ ಎಂದು ಹರ್ಷೋದ್ಘಾರ ವ್ಯಕ್ತಪಡಿಸಿದರು
ಈ ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಸದಸ್ಯರಾದ ಸೌಮ್ಯ ಉಮೇಶ್, ರಮೇಶ್, ಹರೀಶ್ ಬಲ್ಲಾಳ್, ಕೃಷ್ಣಪ್ಪ, ನಾಗೇಂದ್ರ, ಸುಬ್ಬಣ್ಣ, ಬಾಬು, ಆನಂದ್, ಅಡ್ವೊಕೇಟ್ ಭಾಗ್ಯಮ್ಮ ವೆಂಕಟೇಶ್,ಮಹದೇವು, ರಾಜಣ್ಣ,ರೇಣುಕಾ, ಪಾಪಣ್ಣ,ವಿಶ್ವನಾಥ್, ನರೇಂದ್ರ ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.