ಕೆಆರ್ ಕ್ಷೇತ್ರದ ಶಾಸಕ ಓರ್ವ ಸುಳ್ಳುಗಾರ ಮಾಜಿ ಶಾಸಕ ಸೋಮಶೇಖರ್ ವಾಗ್ದಾಳಿ

761
Share

ಮೈಸೂರಿನ ಕೆಆರ್ ಕ್ಷೇತ್ರದ ಶಾಸಕ ರಾಮದಾಸರ ಅವರು ಒಬ್ಬ ಸುಳ್ಳುಗಾರ ಎಂದು ಗಂಭೀರವಾಗಿ ಮಾಜಿ ಶಾಸಕ ಎಂಕೆ ಸೋಮಶೇಖರ್ ಅವರು ಆರೋಪಿಸಿದರು.
ಅವರು ಇಂದು ಬೆಳಗ್ಗೆ ಮೈಸೂರು ನಗರದಲ್ಲಿರುವ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಶಾಸಕ ರಾಮದಾಸರ ಅವರು ಅಭಿವೃದ್ಧಿ ಕೆಲಸಕ್ಕೆ ಅಡ್ಡಿಯನ್ನು ಉಂಟು ಮಾಡುವುದೇ ಅವರ ಮೂಲ ಉದ್ದೇಶವಾಗಿರುತ್ತದೆ ಎಂದು ಅವರು ತಿಳಿಸಿದರು
ಮೈಸೂರು ನಗರದ ವಿದ್ಯಾರಣ್ಯಪುರಂನಲ್ಲಿರುವ ಸೂಯೇಜ್ ಫಾರಂ ಕಸ ವಿಲೇವಾರಿ ಬಗ್ಗೆ ಶಾಸಕ ಕೆ ರಾಮದಾಸ್ ಹೊತ್ತು ಸಂಸದ ಪ್ರತಾಪ್ ಸಿಂಹ ಅವರ ನಡಿಗೆ ಅವರ ನಡುವೆ ನಡೆಯುತ್ತಿರುವ ಜಗಳ ಕಿತ್ತಾಟದ ಬಗ್ಗೆ ಮಾತನಾಡುತ್ತಾ ,
ರಾಮದಾಸ ಅವರು ಸರ್ಕಾರದಿಂದ ತಮಗೆ ಯಾವ ನೊಟೀಸು ಬಂದಿಲ್ಲ ಎನ್ನುವುದರ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂದ ಅವರು ಸರ್ಕಾರದಿಂದ ನಡೆಯುವ ಸಭೆಗಳಿಗೆ ಮಾಜಿ ಶಾಸಕರಿಂದ ಹಿಡಿದು ನಗರ ಪಾಲಿಕೆ ಸದಸ್ಯರಿಗೆ ಮೀಟಿಂಗ್ ನೋಟಿಸ್ ಬರುತ್ತದೆ ಹೀಗಿರುವಾಗ ಅಧಿಕಾರದಲ್ಲಿರುವ ಶಾಸಕರಿಗೆ ಮೀಟಿಂಗ್ ನೋಟಿಸ್ ಬಂದಿರುವುದಿಲ್ಲ ಎಂದು ಹೇಳಿದರೆ ನಂಬಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು
ಶಾಸಕ ರಾಮದಾಸ್ ರವರು ಕ್ಯಾರ್ ಕ್ಷೇತ್ರದ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿರುವ ಬಗ್ಗೆ ಎಂಕೆ ಸೋಮಶೇಖರ್ ಅವರು ಸಂಪೂರ್ಣವಾಗಿ ವಿವರವನ್ನುಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು .


Share