ಕೆಪಿಸಿಸಿ ಅಧ್ಯಕ್ಷರಿಂದ ಕಾಂಗ್ರೆಸ್ ವೈಖರಿ ಬಗ್ಗೆ ಶ್ಲಾಘನೆ

317
Share

ಮೈಸೂರು ಜಿಲ್ಲಾ ಕಾಂಗ್ರೆಸ್ ಕಾರ್ಯವೈಖರಿಯನ್ನು *ಶ್ಲಾಘಿಸಿದ ಕೆಪಿಸಿಸಿ ಅಧ್ಯಕ್ಷರಾದ ** ಶ್ರೀ* ಡಿ.ಕೆ.ಶಿವಕುಮಾರ್ .20.05.2020

ಕೆಪಿಸಿಸಿ ಕೊರೊನಾ ವಿಪತ್ತು ಪರಿಹಾರ ನಿಧಿಗೆ ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾಧ್ಯಕ್ಷರಾದ ಶ್ರೀ ಡಾ ಬಿಜೆವಿ ರವರ ನೇತೃತ್ವದಲ್ಲಿ ₹16,51,000.00 ಚೆಕ್ ಅನ್ನು ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಬೆಂಗಳೂರಿನ ಅವರ ಗೃಹ ಕಚೇರಿಯಲ್ಲಿ ಹಸ್ತಾಂತರಿಸಲಾಯಿತು.ಈ ವೇಳೆ ಮಾಜಿ ಸಂಸದರಾದ ಆರ್. ಧ್ರುವನಾರಾಯಣ್, ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯರಾದ ಆರ್. ಧರ್ಮಸೇನಾ, ಮಾಜಿ ಶಾಸಕರಾದ ಶ್ರೀ. ಕಳಲೆ ಕೇಶವಮೂರ್ತಿ, ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ರವಿಶಂಕರ್ ಉಪಸ್ಥಿತರಿದ್ದರು.. ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿಕೆ ಶಿವಕುಮಾರ್ ಅವರು ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ಸಿನ ಹಿಂದಿನ ಕಾರ್ಯವೈಕರಿ ಹಾಗೂ COVID 19 ಗೆ ಸಂಬಂಧಿಸಿದ ಕೆಪಿಸಿಸಿ ನಿಯೋಜಿತ ಟಾಸ್ಕ್ ಫೋರ್ಸ್ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳ ಮೂಲಕ ಸಮಾಜದ ನೊಂದ ಹಾಗೂ ನಿರಾಶ್ರಿತರ ನೋವಿಗೆ ಸ್ಪಂದಿಸಿದ ಪ್ರತಿಯೊಬ್ಬರನ್ನು ಕೆಪಿಸಿಸಿ ಅಭಿಮಾನಪೂರ್ವಕವಾಗಿ ಅಭಿನಂದಿಸುತ್ತದೆ ಎಂದು ತಿಳಿಸಿದರು.

ವರದಿ :- ಕಾಡನಹಳ್ಳಿ ಕೆ ಪಿ ಚಿಕ್ಕಸ್ವಾಮಿ. ಮೈಸೂರು ಡಿಸಿಸಿ. ಮಾಧ್ಯಮ ವರದಿಗಾರರು.


Share