ಕೆಪಿಸಿಸಿ ಅಧ್ಯಕ್ಷರ ಅಧಿಕಾರ ಸ್ವೀಕಾರ ಕಾರ್ಯಕ್ರಮ ಮುಂದೂಡನೆ ?

487
Share

ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ರವರ ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನು ಅನಿವಾರ್ಯವಾಗಿ ಮುಂದೂಡಬೇಕಾಯಿತು. ಇತ್ತೀಚೆಗೆ ನಡೆದ ಪಕ್ಷದ ಹಿರಿಯ ಮುಖಂಡರ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಸರಳ ಹಾಗೂ ವಿಶಿಷ್ಟ ರೀತಿಯಲ್ಲಿ ಈ ಪದಗ್ರಹಣ ಕಾರ್ಯಕ್ರಮವನ್ನು ಜೂನ್ 7 ರಂದು ನಡೆಸಲು ತೀರ್ಮಾನಿಸಲಾಗಿದೆ. ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ

ಈಗಿನ ಪರಿಸ್ಥಿತಿಯಲ್ಲಿ ದೊಡ್ಡಮಟ್ಟದ ಕಾರ್ಯಕ್ರಮ ಏರ್ಪಡಿಸಲು ಸಾಧ್ಯವಾಗುತ್ತಿಲ್ಲ. ಆದರೂ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಹಿತೈಷಿಗಳು ಸಾಮೂಹಿಕವಾಗಿ ಮತ್ತು ಪರೋಕ್ಷವಾಗಿ ನನ್ನ ಜತೆಯಲ್ಲೇ ಏಕಕಾಲದಲ್ಲಿ ಈ ಸಮಾರಂಭದಲ್ಲಿ ಪಾಲುಗೊಳ್ಳುವಂತೆ ಮಾಡಲು ಪಕ್ಷದ ವತಿಯಿಂದ ಒಂದು ವಿಶಿಷ್ಟ ಕಾರ್ಯಕ್ರಮ ರೂಪಿಸಲಾಗಿದೆ.

ಬೆಂಗಳೂರಿನಲ್ಲಿ ಸೀಮಿತ ಮುಖಂಡರ ಸಮ್ಮುಖದಲ್ಲಿ ನಡೆಯಲಿರುವ ಸರಳ ಸಮಾರಂಭದ ಜತೆ ತಾವೆಲ್ಲರೂ ತಮ್ಮ-ತಮ್ಮ ಜಿಲ್ಲಾ ಪಂಚಾಯತ್ ಕ್ಷೇತ್ರ/ಕಾರ್ಪೊರೇಷನ್ ವಾರ್ಡ್/ನಗರಸಭೆ/ಪುರಸಭೆ/ಗ್ರಾಮ ಪಂಚಾಯತ್‌ಗಳಲ್ಲಿ ಇದ್ದುಕೊಂಡೇ, ನನ್ನ ಜತೆ ತಾವೂ ಸಹ ಪ್ರತಿಜ್ಞಾವಿಧಿ ಸ್ವೀಕರಿಸುವ ಸಲುವಾಗಿ ಇಲ್ಲಿ ಪಟ್ಟಿ ಮಾಡಿರುವ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು.

ಕಾರ್ಯಸೂಚಿ ಪಟ್ಟಿ

೧. ತಮ್ಮ ಜಿಲ್ಲೆಯ ಪ್ರತಿಯೊಂದು ಪಂಚಾಯತ್‌ಕ್ಷೇತ್ರ/ಕಾರ್ಪೊರೇಷನ್ ವಾರ್ಡ್/ನಗರಸಭೆ/ಪುರಸಭೆ/ ಗ್ರಾಮ ಪಂಚಾಯತ್‌ಗಳ ಪ್ರಮುಖ ಸ್ಥಳಗಳಲ್ಲಿ ಈ ಪ್ರಸಾರದಲ್ಲಿ ಕಾರ್ಯಕರ್ತರು ಭಾಗವಹಿಸುವ ಮತ್ತು ವೀಕ್ಷಿಸುವ ವ್ಯವಸ್ಥೆಗಳನ್ನು ಕೈಗೊಳ್ಳಬೇಕು.

೨. ಜಿಲ್ಲಾ ಮಟ್ಟದ ಪದಾಧಿಕಾರಿಗಳ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರ ಸಭೆ ಕರೆದು ಎಲ್ಲಾ ಬ್ಲಾಕ್‌ಗಳಿಗೆ ವೀಕ್ಷಕರನ್ನು ನೇಮಕ ಮಾಡಬೇಕು. ಜಿಲ್ಲಾ ಕಚೇರಿಯಲ್ಲಿ ದೊಡ್ಡ ಮಟ್ಟದ ವ್ಯವಸ್ಥೆ ಮಾಡಬೇಕು.

೩. ಬ್ಲಾಕ್ ಅಧ್ಯಕ್ಷರ ಮೂಲಕ ಎಲ್ಲಾ ಜಿಲ್ಲಾ ಪಂಚಾಯತ್ ಕ್ಷೇತ್ರ/ಕಾರ್ಪೊರೇಷನ್ ವಾರ್ಡ್/ನಗರಸಭೆ ಪುರಸಭೆ/ಪಂಚಾಯತ್ ಮಟ್ಟದಲ್ಲಿ ಪೂರ್ವತಯಾರಿ ಮಾಡಲು ಅರ್ಹ ವೀಕ್ಷಕರನ್ನು ನೇಮಿಸÀಬೇಕು.

೪. ಈ ವೀಕ್ಷಕರು ಸ್ಥಳೀಯರ ನೆರವಿನಿಂದ ಅಲ್ಲಿ ಸೂಕ್ತ ಸ್ಥಳಗಳನ್ನು ಆಯ್ಕೆ ಮಾಡಿ, ಪಕ್ಷದ ಸದಸ್ಯರು/ಹಿತೈಷಿಗಳು ಟಿವಿ ಪ್ರಸಾರದ ವೀಕ್ಷಣೆ ಮಾಡಲು ಅಗತ್ಯವಿರುವ ಕನಿಷ್ಟ ೨ ಟಿವಿಗಳ ಜತೆ ಇನ್ನಿತರ ವ್ಯವಸ್ಥೆಗಳನ್ನು ಕೈಗೊಳ್ಳಬೇಕು. ಕೆಪಿಸಿಸಿ ವೀಕ್ಷಕರು ಇವುಗಳ ಉಸ್ತುವಾರಿಯನ್ನು ತೆಗೆದುಕೊಳ್ಳುತ್ತಾರೆ. ಜಿಲ್ಲಾ ಕೇಂದ್ರಗಳಲ್ಲಿ ಜೂಮ್ ಮೂಲಕ ಲೈವ್ ಟೆಲಿಕಾಸ್ಟ್ ನಡೆಸಬೇಕು.

೫. ಕನಿಷ್ಟ ಪಕ್ಷ ಕಾರ್ಪೊರೇಷನ್ ವಾರ್ಡ್ನಲ್ಲಿ ೧, ನಗರಸಭೆಯಲ್ಲಿ ೫, ಪುರಸಭೆಯಲ್ಲಿ ೩ ಮತ್ತು ಪಂಚಾಯತಿಗಳಲ್ಲಿ ೧ ಕಡೆಗಳಲ್ಲಿ ಈ ಕಾರ್ಯಕ್ರಮವನ್ನು ಕಡ್ಡಾಯವಾಗಿಆಯೋಜಿಸಬೇಕು. ಸಭೆಗೆ ಶಾಮಿಯಾನ, ಹಾಲ್ ಅಥವಾ ಮುಖಂಡರ ಮನೆ ಆವರಣದಲ್ಲಿ ಮಾಡಬಹುದು. ಎಲ್ಲಾಕಡೆ ಸಂಬAಧಿತ ಇಲಾಖೆಯಿಂದ ಅನುಮತಿಕಡ್ಡಾಯವಾಗಿ ಪಡೆದುಕೊಳ್ಳಬೇಕು. ಆ ಸಂದರ್ಭದಲ್ಲಿ ಲಾಕ್‌ಡೌನ್ ಆದೇಶ ಜಾರಿಯಲ್ಲಿದ್ದರೆ ಮಾಸ್ಕ್ ಬಳಸುವುದರ ಜೊತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಲಾಕ್‌ಡೌನ್‌ನಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

೬. ಲಾಕ್‌ಡೌನ್ ನಿಯಮದ ಅನುಸಾರ ಸಮಾರಂಭಕ್ಕೆ ಅನುಮತಿ ಪಡೆದುಕೊಂಡು, ಎಲ್ಲರೂ ಮಾಸ್ಕ್ ಬಳಸುವುದರ ಜೊತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಸ್ಥಳದಲ್ಲಿ ಸ್ಯಾನಿಟೈಸರ್ ಒದಗಿಸಬೇಕು.

೭. ಕಾರ್ಯಕ್ರಮ ಯಾವ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ ಎಂಬುದನ್ನು ವಾಟ್ಸಾಪ್ ಮೂಲಕ ತಿಳಿಸಲಾಗುವುದು. ಪ್ರಮಾಣವಚನದ ಕಾರ್ಯಕ್ರಮವನ್ನು ಪಕ್ಷದ ಎಲ್ಲಾ ನಾಯಕರ ಹಾಗೂ ಕಾರ್ಯಕರ್ತರ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವಂತೆ ನೋಡಿಕೊಳ್ಳಬೇಕು.

೮. ಪ್ರತಿ ಸಭೆಯಲ್ಲಿಜಿಲ್ಲಾ ಕೇಂದ್ರಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮತ್ತು ಇತರಕಡೆ ಕನಿಷ್ಟ ೧೦೦ ಮಂದಿ ಹಾಜರಿರುವಂತೆ ವೀಕ್ಷಕರು ನೋಡಿಕೊಳ್ಳಬೇಕು. ಈ ಕಾರ್ಯಕ್ರಮದ ದಿನಾಂಕಕ್ಕಿAತ ಮೊದಲು ಪ್ರತಿ ಹಂತಗಳಲ್ಲಿ ಪೂರ್ವಭಾವೀ ಸಭೆಯನ್ನು ಕರೆಯುವವಾಗ ಸ್ಥಳೀಯ ಮಟ್ಟದಲ್ಲಿ ಮುಖಂಡರ ಮತ್ತು ಕಾರ್ಯಕರ್ತರ ಸಭೆಯನ್ನುಆಯೋಜಿಸಬೇಕು. ಸಭೆಯ ಕಾರ್ಯಕ್ರಮದ ಪಟ್ಟಿಯನ್ನು ತಮಗೆ ಕಳುಹಿಸಿಕೊಡಲಾಗುವುದು. ಹಾಗೆಯೇ ಕಾರ್ಯಕ್ರಮ ಮುಗಿದ ನಂತರ ಸ್ಥಳೀಯ ಮುಖಂಡರು ನೆರೆದಿರುವಜನರನ್ನು ಉದ್ದೇಶಿಸಿ ಮಾತನಾಡಬೇಕು.

೯. ಸಭೆಯಲ್ಲಿ ರಾಷ್ಟçಧ್ವಜ ಮತ್ತು ಪಕ್ಷದ ಧ್ವಜವನ್ನುಹಾರಿಸಬೇಕು.

೧೦. ಕಾರ್ಯಕ್ರಮ ನಡೆಯುತ್ತಿರುವ ಸಂದರ್ಭದಲ್ಲಿ ಕಾರ್ಯಕ್ರಮದ ಎಲ್ಲಾ ವೀಕ್ಷಕರು ನಾವು ನಂತರದಲ್ಲಿ ನೀಡುವ ಮೊಬೈಲ್ ನಂಬರಿಗೆ ಮಿಸ್ಡ್ಕಾಲ್ ನೀಡಬೇಕು.

೧೧. ಮಹಾತ್ಮಾಗಾಂಧಿ, ಶ್ರೀಮತಿ ಸೋನಿಯಾಗಾಂಧಿ, ಶ್ರೀರಾಹುಲ್‌ಗಾಂಧಿ ಮತ್ತು ನೂತನ ಅಧ್ಯಕ್ಷರ ಭಾವಚಿತ್ರಗಳನ್ನು ಪ್ರದರ್ಶಿಸÀಬೇಕು.

೧೨. ಈ ಕಾರ್ಯಕ್ರಮದಲ್ಲಿ ಎಲ್ಲರಿಗೂ ಪ್ರತಿe್ಞÁವಿಧಿ ಬೋಧನೆ ಮಾಡಲಾಗುವುದು. ಎಲ್ಲರೂ ಎದ್ದುನಿಂತು ಅದನ್ನು ಯಥಾಪ್ರಕಾರ ಪುನರುಚ್ಚರಿಸಬೇಕು. ಆ ಬಗ್ಗೆ ಸೂಚನೆಗಳ್ನು ಟಿವಿ ಮೂಲಕವೇ ನೀಡಲಾಗುವುದು.

೧೩. ಕೆಪಿಸಿಸಿ ವೀಕ್ಷಕರು ಮತ್ತು ಜಿಲ್ಲಾಕಾಂಗ್ರೆಸ್ ಅಧ್ಯಕ್ಷರುಗಳು ಈ ಕಾರ್ಯಕ್ರಮ ನಡೆದರೀತಿಯ ಬಗ್ಗೆ ೩ ಫೆÆÃಟೋ ಮತ್ತು ೨ ನಿಮಿಷಗಳ ವೀಡಿಯೋಗಳೊಂದಿಗೆ ಕೆಪಿಸಿಸಿಗೆ ರಹಸ್ಯ ವರದಿಯನ್ನು ಕಳಿಸತಕ್ಕದ್ದು.

೧೪. ಬೆಂಗಳೂರಿನ ಸಮಾರಂಭ ಸರಳವಾಗಿ ನಡೆಯಲಿರುವುದರಿಂದ ಆಹ್ವಾನಿತರಿಗೆ ಮಾತ್ರ ಪ್ರವೇಶವಿರುತ್ತದೆ. ಇತರರು ಅಲ್ಲಿಗೆ ಬರುವಂತಿಲ್ಲ್ಲ. ದಯವಿಟ್ಟು ತಮ್ಮ ಊರಲ್ಲಿಯೇ ಭಾಗವಹಿಸಿ, ದೂರದಿಂದಲೇ ನೂತನ ಅಧ್ಕಕ್ಷರಿಗೆ ಶುಭಕೋರಬೇಕು. ಮುಂದಿನ ದಿನಗಳಲ್ಲಿ ಅವರೇ ಖುದ್ದಾಗಿ ಅಲ್ಲಿಗೆ ಬಂದು ತಮ್ಮನ್ನೆಲ್ಲಾ ಭೇಟಿ ಆಗಲಿದ್ದಾರೆ.. ಎಂದು ಅನಧಿಕೃತವಾಗಿ ತಿಳಿದುಬಂದಿದೆ.


Share