ಕೇಂದ್ರದಿಂದ ಸಣ್ಣ ಕೈಗಾರಿಕೆಗೆ ಪ್ಯಾಕೇಜ್ ಕೊಡುಗೆ bjp ನಗರ ಅಧ್ಯಕ್ಷರಿಂದ ಸ್ವಾಗತ

523
Share

ಪ್ರಕಟಣೆಯ ಕೃಪೆಗಾಗಿ

ದೇಶದ ಆರ್ಥಿಕತೆ ಉತ್ತೇಜಿಸಲು ಪೂರಕ ಅಂಶ ಶ್ಲಾಘನೀಯ

ಬಡವರು,ಶ್ರಮಿಕರ ಜತೆಗೆ ಸಣ್ಣಕೈಗಾರಿಕೆಗೆ ಕೇಂದ್ರದ ಪ್ಯಾಕೇಜ್: ಶ್ರೀವತ್ಸ ಸ್ವಾಗತ

ಕರೋನಾ ವೈರಸ್ ನಿಯಂತ್ರಿಸಲು ಲಾಕ್‍ಡೌನ್ ಹೇರಿದ್ದರಿಂದ ದೇಶದ ಆರ್ಥಿಕ ಪರಿಸ್ಥಿತಿಯನ್ನು ಉತ್ತೇಜಿಸಲು ಕೇಂದ್ರಸರಕಾರ ಘೋಷಣೆ ಮಾಡಿರುವ ವಿಶೇಷ ಪ್ಯಾಕೇಜ್ ಬಡವರು,ಶ್ರಮಿಕರ ಜತೆ ಸಣ್ಣ ಕೈಗಾರಿಕೆ ಪುನಶ್ಚೇತನಗೊಳಿಸಲು ದಾರಿಯಾಗಿದ್ದು,ಇದನ್ನು ಮುಕ್ತಕಂಠದಿಂದ ಸ್ವಾಗತಿಸುವೆ ಎಂದು ಮೈಸೂರು ನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಎಸ್.ಶ್ರೀವತ್ಸ ಹೇಳಿದ್ದಾರೆ. ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಧಾನಿ ನರೇಂದ್ರಮೋದಿ ಅವರ ಆಶಯಕ್ಕೆ ಅನುಗುಣವಾಗಿ ಪ್ರಕಟಿಸಿರುವ ಆರ್ಥಿಕ ಪ್ಯಾಕೇಜ್ ಎಲ್ಲ ವಲಯದಲ್ಲೂ ಸಮರ್ಥವಾಗಿದೆ. ಮೋದಿ ಹೇಳಿದ ಭಾರತವನ್ನ ಕಟ್ಟಲು ಈ ಅಂಶಗಳು ಪೂರಕವಾಗಿದೆ. ಇದು ದೇಶದ ಸಂಕಷ್ಟವನ್ನ ದೂರ ಮಾಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದಾಯ ತೆರಿಗೆ ಪಾವತಿಯ 18ಸಾವಿರ ಕೋಟಿ ವಾಪಸ್ ಮಾಡುವ ಜತೆಗೆ 14ಕೋಟಿ ತೆರಿಗೆ ಪಾವತಿದಾರರಿಗೆ ನೆರವಾಗಲಿದೆ. ಲಾಕ್‍ಡೌನ್‍ನಿಂದ ಉತ್ಪಾದನೆ ಇಲ್ಲದೆ ಸ್ಥಗಿತಗೊಂಡು ಬ್ಯಾಂಕ್ ಸಾಲ,ತೆರಿಗೆ ಪಾವತಿ,ಉದ್ಯೋಗ ಕಡಿತದ ಚಿಂತನೆಯಲ್ಲಿದ್ದ ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳಿಗೆ ದೊಡ್ಡ ಪ್ರೋತ್ಸಾಹ,ಹಣಕಾಸಿನ ನೆರವು ನೀಡಿರುವುದರಿಂದ ಸಣ್ಣ ಕೈಗಾರಿಕೆದಾರರಿಗೆ ದೊಡ್ಡ ಅನುಕೂಲವಾಗಲಿದೆ.ಇದರಿಂದ ಉದ್ಯೋಗ ಕಡಿತವಾಗುವುದು ದೂರವಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಸಾಲ ಮರುಪಾವತಿಗೆ ನಾಲ್ಕು ವರ್ಷದವರೆಗೆ ಅವಕಾಶ ಕೊಟ್ಟಿದ್ದಲ್ಲದೆ, ಸಾಲಕ್ಕೆ ಮೊದಲ 12ತಿಂಗಳವರೆಗೆ ಮರುಪಾವತಿ ಅವಶ್ಯಕತೆ ಇಲ್ಲ ಅಂತ ಹೇಳಿರುವುದರಿಂದ ಉದ್ಯಮಿಗಳಿಗೆ ಸಹಾಯವಾಗಿದೆ. ಆರ್ಥಿಕಪರಿಸ್ಥಿತಿ ಸಾಧಾರಣ ಸ್ಥಿತಿಗೆ ಬರುವ ತನಕ ಉದ್ಯಮಿಗಳು ಚೇತರಿಸಿಕೊಳ್ಳಬಹುದು ಎಂದು ನುಡಿದಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 1610ಕೋಟಿ ವಿಶೇಷ ಪ್ಯಾಕೇಜ್ ನೀಡಿದ್ದರಿಂದ ಅಸಂಘಟಿತ ವಲಯದ ಜನರಿಗೆನೆರವಾಗಿದೆ. ಈಗ ದೇಶದ ಬಹುಪಾಲುಕ್ಷೇತ್ರಕ್ಷೆ ಅನ್ವಯವಾಗುವಂತೆ ಪ್ರಧಾನಿ ಮೋದಿ ಸರಕಾರ ಕೊಟ್ಟ ಪ್ಯಾಕೇಜ್ ಕರೋನಾದಿಂದ ಕಂಗೆಟ್ಟ ಜನರಿಗೆ ಅನುಕೂಲವಾಗಿದ್ದು,ಇಂತಹ ಐತಿಹಾಸಿಕ ನಿರ್ಧಾರ ಕೈಗೊಂಡ ಪ್ರಧಾನಿ ಮೋದಿ ಸರಕಾರಕ್ಕೆ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುವೆ ಎಂದು ಹೇಳಿದ್ದಾರೆ.ಆದಾಯ ತೆರಿಗೆ ಪಾವತಿಸಲು ಸಮಯ ಕೊಟ್ಟಿರುವ ಜತೆಗೆ ಹದಿನೈದು ಸಾವಿರ ಸಂಬಳ ಪಡೆಯುವ ನೌಕರರಿಗೆ ಪಿಎಫ್ ಹಣವನ್ನು ಕೇಂದ್ರ ಸರಕಾರ ನೇರವಾಗಿ ಪಾವತಿಸಲಿದೆ.ಸರಕಾರಿ ಕಾಮಗಾರಿಯನ್ನು ಗುತ್ತಿಗೆ ಪಡೆದಿರುವ ಗುತ್ತಿಗೆ ದಾರರು ಕಾಮಗಾರಿ ಮುಗಿಸಲು ಆರು ತಿಂಗಳ ಸಮಯ ಕೊಟ್ಟಿರುವುದು ಅನುಕೂಲ ಆಗಿದೆ ಎಂದು ಹೇಳಿದ್ದಾರೆ

ಇಂತಿ

ಟಿ.ಎಸ್.ಶ್ರೀವತ್ಸ,ಅಧ್ಯಕ್ಷರು, ಮೈಸೂರು ನಗರ ಜಿಲ್ಲಾ ಬಿಜೆಪಿ


Share