ರಕ್ಷಾಭಂಧನ ಆಚರಣೆ
ಕೇಂದ್ರ ಕಾರಾಗೃಹದಲ್ಲಿ ವಿಶ್ವ ಭ್ರಾತೃತ್ವ ಸ್ನೇಹ ಸೂಚಕ ರಕ್ಷಾಭಂಧನ ಆಚರಣೆ
ಚಾಮರಾಜನಗರ-ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ,ಕೇಂದ್ರ ಕಾರಾಗೃಹ, ಸಾಧನಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಕೇಂದ್ರ ಕಾರಾಗೃಹ ದಲ್ಲಿ ವಿಶ್ವ ಭ್ರಾತೃತ್ವ ಸ್ನೇಹ ಸೂಚಕ ರಕ್ಷಾಭಂಧನ ಕಾರ್ಯಕ್ರಮವನ್ನು
ಹಮ್ಮಿಕೊಳ್ಳಲಾಗಿತ್ತು
ಸಂಸ್ಥೆಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜಿ ಮಾತನಾಡಿ ರಕ್ಷಾಭಂಧನವು ಭಂಧನವಲ್ಲ ಅದು ವಿಶ್ವ ಭ್ರಾತೃತ್ವದ ಸ್ನೇಹದ ಬಂಧನದಲ್ಲಿ ಭಂದಿಸುವಂತಹದ್ದಾಗಿದೆ. ಇದು ಕೇವಲ ದಾರವಲ್ಲ. ಪವಿತ್ರತೆಯ ಸೂಚಕವಾಗಿದೆ. ಧೃಡಪ್ರತಿಜ್ಞೆಯ ಪ್ರತೀಕವಾಗಿದೆ.
ಇದು ನಮ್ಮನ್ನು ನಕರಾತ್ಮಕತೆಯಿಂದ ಸಕಾರಾತ್ಮಕತೆ ಕಡೆ ಕೊಂಡೊಯ್ಯುವ ಸಾಧನವಾಗಿದೆ ಎಂದರು. ಇಂದಿನ ದಿನಗಳಲ್ಲಿ ಎಲ್ಲೆಲ್ಲೂ ಅಸುರಕ್ಷತೆ ತಾಂಡವವಾಡುತ್ತಿದೆ. ಎಲ್ಲರ ಮನಸ್ಸು ದುರ್ಬಲವಾಗುತ್ತಿದೆ.
ದುರ್ಬಲ ಮನಸ್ಸನ್ನು ಸಬಲ ಮಾಡುವ ನಿಟ್ಟಿನಲ್ಲಿ ಈಶ್ವರೀಯ ವಿಶ್ವ ವಿದ್ಯಾಲಯವು ಇಂಥಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ಜಿಲ್ಲಾ ಕಾರಾಗೃಹದ ಅಧೀಕ್ಷಕ ಶಿವಕುಮಾರ್ ಮಾತನಾಡಿ ಸಂಬಂಧಗಳು ಮನುಷ್ಯನ ಜೀವನವನ್ನು ಸುಂದರಗೊಳಿಸುತ್ತದೆ.ರಕ್ಷಾಭಂದನದಿಂದ ಸಂಬಂಧಗಳನ್ನು ಗಟ್ಟಿಗೊಳಿಸಬೇಕು. ಸಹೋದರ ತೆಯ ಸಂಬಂಧಗಳನ್ನು ಗುರಿತಿಸುವಂತಹ ಕೆಲಸವಾಗಬೇಕು ಎಂದರು.
ಸಾಧನ ಸಂಸ್ಥೆಯ ಟಿಜೆ ಸುರೇಶ್, ಮಕ್ಕಳ ಸಂರಕ್ಷಣಾಧಿಕಾರಿ ಪ್ರಸನ್ನ, ಓಂ ಶಾಂತಿ ನ್ಯೂಸ್ ಸರ್ವಿಸ್ ನ ಬಿಕೆ ಆರಾಧ್ಯ ಪ್ರಮಿಳ ಆಶಾ ಜಯಲಕ್ಷ್ಮಿ , ತಳ್ಳಿಮನಿ, ರಾಜೀವ್, ಸಿದ್ದೆಗೌಡ ರಮೇಶ್, ಅನಿಲ್ ಕುಮಾರ್ ಮಾರುತಿ , ರೋಜ, ಅರ್ಪಿತ ಇದ್ದರು.