ಕೇಂದ್ರ ಸರ್ಕಾರದ ತ್ರಿಭಾಷಾ ನೀತಿ ವಿರೋಧಿಸಿ ಪ್ರತಿಭಟನೆ.

Share

ಕೇಂದ್ರ ಸರ್ಕಾರದ ತ್ರಿಭಾಷಾ ನೀತಿ ವಿರೋಧಿಸಿ

ನಗರದ ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗ ಪ್ರತಿಭಟನೆ ನಡೆಸಲಾಯಿತು

ನಾವು ದ್ರಾವಿಡ ಕನ್ನಡಿಗರು ಎಂಬ ಘೋಷ ವಾಕ್ಯದಡಿ ಪ್ರತಿಭಟನೆ ಯಲ್ಲಿ ಘೋಷಣೆ ಕೇಳಿಬಂದಿತು.

ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ , ಅದು ಪ್ರಾದೇಶಿಕ ಭಾಷೆ

ಜಗತ್ತಿನ್ನಲ್ಲಿ ಮೊಟ್ಟ ಮೊದಲ ನುಡಿಗಳು ದ್ರಾವಿಡ ನುಡಿಗಳು

ಕನ್ನಡ ದ್ರಾವಿಡ ನುಡಿಗಳಲ್ಲಿ ಒಂದಾಗಿದೆ ಪ್ರತಿಭಟನಾಕಾರರು ತಿಳಿಸಿದ್ದಾರೆ

ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡಲು ಹೊರಟಿದೆ

ನಮ್ಮ ರಾಜ್ಯದಲ್ಲಿ ಈಗಾಗಲೇ ಕನ್ನಡ ಇಂಗ್ಲೀಷ್ ಭಾಷೆ ಇದೆ

ಈ ಎರಡು ಭಾಷೆಗಳೇ ವಿದ್ಯಾರ್ಥಿಗಳಿಗೆ ಕಲಿಕೆಗೆ ಸಾಕು

ಅದನ್ನು ಬಿಟ್ಟು ಬಲವಂತವಾಗಿ ವಿದ್ಯಾರ್ಥಿಗಳ ಮೇಲೆ ಹಿಂದಿ ಹಾಗೂ ಸಂಸ್ಕೃತ ಹೇರಿಕೆ ಸರಿಯಲ್ಲ

ಸಂವಿಧಾನದ ಆರ್ಟಿಕಲ್ 343 ಮತ್ತು 351 ತಿದ್ದುಪಡಿ ತಂದು ಹಿಂದಿಗೆ ಇರುವ ವಿಶೇಷ ಸ್ಥಾನಮಾನ ರದ್ದುಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು

ಆ ಮೂಲಕ ಹಿಂದಿಯನ್ನು ತೊಲಗಿಸಿ ಕನ್ನಡ ಉಳಿಸಬೇಕು

ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಇದು ತಪ್ಪು

ಕನ್ನಡ ಇಂಗ್ಲಿಷ್ ಜೊತೆಗೆ ಮೂರನೇ ಭಾಷೆಯಾಗಿ ಕಲಿಸಲು ಪ್ರಾರಂಭ ಮಾಡಿದ್ದೆ ಒಂದು ಷಡ್ಯಂತ್ರ ಪ್ರತಿಭಟನಾಕಾರರು ನೀಡಿರುವ ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಇಂಡಿಯಾ ಒಕ್ಕೂಟ ಮಟ್ಟದ ಎಲ್ಲಾ ಪರೀಕ್ಷೆಗಳನ್ನು ದ್ರಾವಿಡ ಕನ್ನಡದಲ್ಲೂ ನೀಡಬೇಕು

ಸೆಪ್ಟೆಂಬರ್ 14ರಂದು ಕನ್ನಡ ನಾಡಿನಲ್ಲಿ ಯಾರು ಯಾವ ರೂಪದಲ್ಲಿಯೂ ಹಿಂದಿ ದಿವಸ್ ಆಚರಿಸಬಾರದು ಎಂದು ಮುಖ್ಯಮಂತ್ರಿಗಳು ಈ ಕೂಡಲೇ ಆದೇಶ ಹೊರಡಿಸಬೇಕು


Share