ಕೊರೊನಾ ಎಂಬುದೊಂದು ದೈವ ಇಚ್ಛೆಯಿಂದಲೇ ಎದುರಾದ ಪರೀಕ್ಷೆ ಅದನ್ನು ಸೇವೆಯಿಂದ ಮಾತ್ರ ಗೆಲ್ಲಬಹುದಾಗಿದೆ.

ಕೊರೊನ ಸೋಂಕು ತಡೆಯಲು ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಕೋರೊನ ಯೋಧರಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಶ್ರೀಗಳಾದ ಶ್ರೀ ಶ್ರೀ ದತ್ತ ವಿಜಯಾನಂದ ಸ್ವಾಮೀಜಿಯವರು ಮಾತನಾಡಿ ಕೊರೊನಾ ಎಂಬುದೊಂದು ದೈವ ಇಚ್ಛೆಯಿಂದಲೇ ಎದುರಾದ ಪರೀಕ್ಷೆ ಅದನ್ನು ಸೇವೆಯಿಂದ ಮಾತ್ರ ಗೆಲ್ಲಬಹುದಾಗಿದೆ.ಅಂತಹ ಸೇವಾ ಕಾರ್ಯ ಸೋಮಶೇಖರ್ ರವರಿಂದ 56ದಿನದಿಂದಲೂ ನಡೆದಿರುವುದು ಶ್ಲಾಘನೀಯ ಕಾರ್ಯ.ನಮ್ಮ ಹಿರಿಯ ಸ್ವಾಮಿಜಿಗಳು ಕೊರೊನಾ ಸಂಕಷ್ಟದಲ್ಲಿರುವವರಿಗೆ ಧಾರಾಳ ಮನಸ್ಸಿನಿಂದ ಸೇವೆಯನ್ನು ಮಾಡುತ್ತಿದ್ದು ಮೈಸೂರು ನಗರದಲ್ಲಿ ಇದುವರೆಗೆ 70ಲಕ್ಷ ರೂ ಗಳಷ್ಟು ವಿನಿಯೋಗಿಸಿದ್ದಾರೆ.ಮತ್ತು ನಮ್ಮ 80 ಮಠಗಳು ಈ ಸತ್ಕಾರ್ಯದಲ್ಲಿ ತೊಡಗಿಸಿಕೊಂಡಿವೆ.ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ರವರ ಸೇವಾ ಕಾರ್ಯವನ್ನು ಗಮನಿಸಿದ ಆಶ್ರಮದ ಹಿರಿಯ ಸ್ವಾಮಿಜಿ ಕರೆ ಮಾಡಿ ನೀವು ಮಾಡುವ ಸೇವೆಗೆ ನನ್ನ ಆಶ್ರಮ ಸಂಪೂರ್ಣ ಸಹಕಾರ ನೀಡುತ್ತದೆ.ನೀವೂ ಮಾಡುತ್ತಿರುವ ಕಾರ್ಯವನ್ನು ಆತ್ಮಸ್ಥೈರ್ಯದಿಂದ ಮಾಡಿ.ನಿಮ್ಮ ಜೊತೆ ನಾವಿದ್ದೇವೆ ಎಂದು ಹೇಳಿದ್ದರು.ಅದರಂತೆ ಆಶ್ರಮ ಎಂ ಕೆ ಸೋಮಶೇಖರ್ ರವರ ಸೇವೆಗೆ ಸಹಕಾರ ನೀಡಿದೆ.ಇದು ಮುಗಿದಿಲ್ಲ ಇನ್ನೂ ಮುಂದೆ ಮೊದಲಿಗಿಂತ ಎಚ್ಚರವಾಗಿ ಜಾಗೃತರಾಗಿ ಈ ವೈರಾಣುವಿನ ವಿರುದ್ಧ ಸೆಣಸಬೇಕಿದೆ ಎಂದು ತಿಳಿಸಿದರು.