ರೇಖೆಗಳಲ್ಲಿ ಮೂಡಿದ ಕೊರೊನಾ ಜಾಗೃತಿ ವ್ಯಂಗ್ಯ ಚಿತ್ರಗಳು
ಹುಬ್ಬಳ್ಳಿ: ಕೊರೊನಾ ನಿಯಂತ್ರಿಸಲು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪ್ರತಿಯೊಬ್ಬ ನಾಗರಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು, ಸ್ಯಾನಿಟೈಸರ್‍ನೊಂದಿಗೆ ಕೈ ತೊಳೆದುಕೊಳ್ಳುವುದರ ಮೂಲಕ ಎಚ್ಚರಿಕೆ ವಹಿಸಲಾಗುತ್ತಿದೆ. ಸರ್ಕಾರವು ಕೊರೊನಾ ಕಟ್ಟಿ ಹಾಕಲು ಸಾಕಷ್ಟು ಜಾಗೃತಿ ಮೂಡಿಸುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಕೊರೊನಾ ವೈರಸ್ ನಿಯಂತ್ರಣ ಜಾಗೃತಿಗೆ ಕಾರ್ಟೂನ್ ಮೂಲಕ ಜನರನ್ನು ಪರಿಣಾಮಕಾರಿಯಾಗಿ ತಲುಪಲು ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ. ಜಿಲ್ಲಾಡಳಿತದ ಈ ವಿನೂತನ ಪ್ರಯತ್ನಕ್ಕೆ ಗಳಗಿ-ಹುಲಕೊಪ್ಪದ ಪ್ರೌಢಶಾಲಾ ಶಿಕ್ಷಕ, ಕಲಾವಿದ ಸಂಜೀವ ಕಾಳೆ ತಮ್ಮ ಕಲಾಕುಂಚದಲ್ಲಿ ವೈವಿಧ್ಯಮಯ ವ್ಯಂಗ್ಯ ಚಿತ್ರಗಳನ್ನು ಅರಳಿಸಿ ಜನರ ಭಾವನೆಗಳನ್ನು ತಲುಪಲು ಸಹಕಾರಿಯಾಗಿದ್ದಾರೆ.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ಜಿಲ್ಲಾ ಪಂಚಾಯತ ಸಿಇಒ ಡಾ.ಬಿ.ಸಿ. ಸತೀಶ್ ಅವರ ಮಾರ್ಗದರ್ಶನದಲ್ಲಿ ಕಲಾವಿದ ಸಂಜೀವ ಕಾಳೆ ತಮ್ಮ ಕಾರ್ಟೂನ್ ಮೂಲಕ ಕೊರೋನಾ ವೈರಸ್ ಕುರಿತು ವಿಶೇಷವಾಗಿ ಜಾಗೃತಿ ಮೂಡಿಸಿದ್ದಾರೆ.
ದಿನೇ ದಿನೇ ಹೆಚ್ಚಳ ಆಗುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ ಕುರಿತು ಗಮನ ಸೆಳೆಯಲು, ಓರ್ವ ವ್ಯಕ್ತಿ ಮನೆಯೊಳಗಿಂ