0 . ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಕರ್ನಾಟಕ ಸರ್ಕಾರ ಕೋವಿಡ್ – 19 ಪರೀಕ್ಷೆಯ ಫಲಿತಾಂಶ ದೊರೆಯುವವರೆಗೂ , ನಿಮ್ಮ ಹಾಗೂ ಇತರರ ಸುರಕ್ಷತೆಗಾಗಿ ನೀವು ಪಾಲಿಸಬೇಕಾದ ಸರಳ ಮತ್ತು ಸುಲಭ ಮುಂಜಾಗ್ರತಾ ಕ್ರಮಗಳು . ಪ್ರಿಯ ನಾಗರಿಕರೆ , • ಕೋವಿಡ್ 19 ಪರೀಕ್ಷೆಗಾಗಿ ನಿಮ್ಮ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದ್ದು , ಫಲಿತಾಂಶ ತಿಳಿಯುವವರೆಗೂ ನೀವು ಮನೆಯಲ್ಲಿಯೇ ಪ್ರತ್ಯೇಕವಾಗಿರುವಂತೆ ಎಲ್ಲಾ ಅಗತ್ಯ ಮುಂಜಾಗ್ರತೆಯನ್ನು ವಹಿಸಬೇಕು . • ಮನೆಯಲ್ಲಿ ನಿಗದಿಪಡಿಸಿದ ಕೋಣೆಯಲ್ಲಿಯೇ ನೀವು ಇರಬೇಕು ಹಾಗೂ ಕುಟುಂಬದ ಇತರ ಸದಸ್ಯರೊಂದಿಗೆ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು . • ಮಾಸ್ಟ್ ಅನ್ನು ನೀವು ಯಾವಾಗಲೂ ಸರಿಯಾದ ಕ್ರಮದಲ್ಲಿ ಧರಿಸಿರಬೇಕು . ನಿಮ್ಮ ಗಂಟಲು ದ್ರವ ಪರೀಕ್ಷೆಯ ಫಲಿತಾಂಶವನ್ನು ನಿಮಗೆ ದೂರವಾಣಿಯ ಮೂಲಕ ತಿಳಿಸಲಾಗುವುದು . • ನಿಮಗೆ ಕೋವಿಡ್ 19 ದೃಢಪಟ್ಟಲ್ಲಿ , ನೀವು ಭಯಪಡಬೇಕಿಲ್ಲ . ಈ ಕೆಳಗೆ ತಿಳಿಸಿರುವ ಅಗತ್ಯ ಕ್ರಮಗಳನ್ನು ಪಾಲಿಸುವುದರಿಂದ ನೀವು ಗುಣಮುಖರಾಗುವಿರಿ . ” ನಿಮಗೆ ಕೋವಿಡ್ 19 ದೃಢಪಟ್ಟ ಫಲಿತಾಂಶ ತಿಳಿದ ನಂತರ 17 ದಿನಗಳ ಕಾಲ ನೀವು ಮನೆಯಲ್ಲಿಯೇ ಪ್ರತ್ಯೇಕವಾಗಿರಬೇಕು . ಮನೆಯಲ್ಲಿ ಪ್ರತ್ಯೇಕವಾಗಿರುವ ಸಂದರ್ಭದಲ್ಲಿ ಪಾಲಿಸಬೇಕಾದ ನಿಯಮಗಳು ಹಾಗೂ ವೈದ್ಯಕೀಯ ಚಿಕಿತ್ಸೆಯ ಉಚಿತ ಸಮಾಲೋಚನೆಗಾಗಿ ಉಚಿತ ಸಹಾಯವಾಣಿ ಆಪ್ತಮಿತ್ರ 14410 ಗೆ ಕರೆ ಮಾಡಿ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಿ . ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದ್ದಲ್ಲಿ ಹತ್ತಿರದ ಆಸ್ಪತ್ರೆ ( ಸರ್ಕಾರಿ / ಖಾಸಗಿ ) ಗೆ ಭೇಟಿ ನೀಡಲು 108 ಆಂಬುಲೆನ್ಸ್ ಅಥವಾ 1912 ಸಹಾಯವಾಣಿಗೆ ಕರೆಮಾಡಿ . ಲಭ್ಯವಿರುವ ವೈದ್ಯಕೀಯ ಸೇವೆಗಳ ಕುರಿತು ಸಹಾಯವಾಣಿಯಿಂದ ನೀವು ಅಗತ್ಯ ಮಾಹಿತಿಯನ್ನು ಹಾಗೂ ಕೋವಿಡ್ 19 ಕುರಿತಾದ ನಿಮ್ಮ ಪ್ರಶ್ನೆಗಳಿಗೂ ಸೂಕ್ತ ಪರಿಹಾರವನ್ನು ಪಡೆಯಬಹುದು . * ನೀವು ಸೋಂಕಿನ ಲಕ್ಷಣರಹಿತರಾಗಿದ್ದು , ನಿಮಗೆ ಇತರೆ ಆರೋಗ್ಯ ಸಮಸ್ಯೆಗಳು ಇಲ್ಲದೆ ಇರುವ ಪಕ್ಷದಲ್ಲ – ನಿಮಗೆ ಮನೆಯಲ್ಲಿಯೇ ಪ್ರತ್ಯೇಕವಾಗಿದ್ದು , ಅಗತ್ಯ ಆರೈಕೆ ಪಡೆಯಲು ಆರೋಗ್ಯ ಅಧಿಕಾರಿಗಳು ಅನುಮತಿ ನೀಡುವರು . * ನಿಮ್ಮಲ್ಲಿ ಕಂಡುಬರುವ ಸೋಂಕಿನ ಲಕ್ಷಣಗಳು ಹಾಗೂ ಅವುಗಳ ತೀವ್ರತೆಯ ಆಧಾರದ ಮೇಲೆ ಮತ್ತು ನಿಮಗಿರುವ ಇತರೆ ಆರೋಗ್ಯ ಸಮಸ್ಯೆಗಳ ಆಧಾರದ ಮೇಲೆ ನೀವು ಮನೆಯಲ್ಲಿಯೇ ( Home Care ) / ಕೊವಿಚ್ ಕೇರ್ ಸೆಂಟರ್ ( Govt CCC / Private CCC ) , sreesus ugd ( Govt / Private ) wasesarbatos dos aparat ಮಾಡಲಾಗುವುದು . ಈ ಕರಪತ್ರದಲ್ಲಿ ತಿಳಿಸಿರುವ ನಿಯಮಗಳನ್ನು ಪಾಲಿಸಿ ಕೋವಿಡ್ ೧೯ ನಿಂದ ಸಂಪೂರ್ಣ ಗುಣಮುಖರಾಗಿರಿ . ಪಂಚಸೂತ್ರಗಳನ್ನು ಪಾಲಿಸೋಣ – ಕೊರೊನಾ ವಿರುದ್ಧ ಗೆಲ್ಲೋಣ ಕೊರೊನಾ ಮುಕ್ತ ಸಮಾಜವನ್ನು ನಿರ್ಮಿಸಲು ನಿಮ್ಮ ಸಹಕಾರ ಅಗತ್ಯ