ಕೊರೊನಾ; ಸಾಂಕ್ರಾಮಿಕ ಮತ್ತು ಆರ್ಥಿಕತೆ ಸವಾಲುಗಳು ವೆಬಿನಾರ್

ಕೊರೊನಾ ಸಾಂಕ್ರಾಮಿಕ ಮತ್ತು ಆರ್ಥಿಕತೆ ಸವಾಲುಗಳು ವೆಬಿನಾರ್

ಧಾರವಾಡ (ಕರ್ನಾಟಕ ವಾರ್ತೆ ) : ಭಾರತ ಸರ್ಕಾರ ಕ್ಷೇತ್ರಜನಸಂಪರ್ಕ ಕಾರ್ಯಾಲಯ, ಧಾರವಾಡ (ವಾರ್ತಾ ಮತ್ತು ಪ್ರಸಾರ ಸಚಿವಾಲಯ) ಹಾಗೂ ಅರ್ಥಶಾಸ್ತ್ರ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಇವುಗಳ ಸಂಯುಕ್ತಾಶ್ರಯದಲ್ಲಿ “ಕೋವಿಡ್-19 ಕೋರೊನ ಸಾಂಕ್ರಾಮಿಕ ಮತ್ತು ಭಾರತದ ಆರ್ಥಿಕತೆ ಸವಾಲುಗಳು ಮತ್ತು ಮುಂದಿರುವ ದಾರಿ ಕುರಿತಾಗಿ ವೆಬಿನಾರ್ ವಿಶೇಷ ಅಂತರ್ಜಾಲ ಉಪನ್ಯಾಸ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿತ್ತು.

ವೆಬಿನಾರನ್ನು ಕರ್ನಾಟಕ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೋ. ಶಿವಪ್ಪ ಉದ್ಘಾಟನಾ ಭಾಷಣ ಮಾಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಡಾ, ಜಿ.ಡಿ.ಹಳ್ಳಿಕೇರಿ, ಉಪನಿರ್ದೇಶಕರು, ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ಧಾರವಾಡ ಹಾಗೂ ಬಳ್ಳಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೋರೊನ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಗರಿಬ್ ಕಲ್ಯಾಣ ಯೋಜನೆ ಅಡಿಯಲ್ಲಿ ಬರುವ ವಿವಿಧ ಸೌಲಭ್ಯಗಳನ್ನು ವಿವರಿಸಿ ಆ ಕುರಿತು ಎಲ್ಲರೂ ಹೆಚ್ಚಿನ ಮಾಹಿತಿ ಹೊಂದಲು ಕೇಂದ್ರ ಸರ್ಕಾರ ಇಂಥಹ ಮಾಹಿತಿ ನೀಡುವ ವೆಬಿನಾರಗಳನ್ನು ವಿವಿಧ ಇಲಾಖೆಗಳ ಮೂಲಕ ಮತ್ತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಮೂಲಕ ಸಮುದಾಯಕ್ಕೆ ಮಾಹಿತಿ ನೀಡುವ ಉದ್ದೇಶದಿಂದ ಆಯೋಜಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಡಾ. ಎಸ್.ಟಿ.ಬಾಗಲಕೊಟಿ, ಅರ್ಥಶಾಸ್ತ್ರ ಉಪನ್ಯಾಸಕರು ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡ ಇವರು ಕೋರೊನಾ ಸಾಂಕ್ರಾಮಿಕ ಮತ್ತು ಆರ್ಥಿಕ ಚೇತರಿಕೆ ಕುರಿತು ಸವಿಸ್ಥಾರವಾಗಿ ಪ್ರಾತ್ಯೆಕ್ಷೀಕೆ ತೋರಿಸುವ ಮೂಲಕ ಉಪನ್ಯಾಸ ನೀಡಿದರು. ಅದೇ ರೀತಿಯಾಗಿ ಪ್ರಾದ್ಯಾಪಕರು ಮತ್ತು ಧಾರವಾಡ ಸಿ.ಎಮ್.ಡಿ.ಆರ್.ನ ನಿರ್ದೇಶಕರಾದ ಡಾ.ವಿನೋದ ಅಣ್ಣಿಗೇರಿ ಇವರು ಆತ್ಮ ನಿರ್ಭರ ಭಾರತ ಕುರಿತು ವಿವರಣೆಯನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಬಿ.ಹೆಚ್.ನಾಗೂರ ವಹಿಸಿದ್ದರು. ಧಾರವಾಡ ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಮುರಳಿಧರ ಕಾರಭಾರಿ ಕಾರ್ಯಕ್ರಮವನ್ನು ನಿರ್ವಹಿಸಿ ಸ್ವಾಗತಿಸಿದರು. ಸಂಶೋದನ ವಿದ್ಯಾರ್ಥಿನಿಯರಾದ ಪ್ರೀಯದರ್ಶಿನಿ ಪಾಟೀಲ ಸ್ವಾಗತ ಗೀತೆ ಹಾಡಿ, ಏಶ್ವರ್ಯಾ ನಿರೂಪಿಸಿ, ದಿವ್ಯಾ ಹೆಗಡೆ ವಂದಿಸಿದರು. ವೆಬಿನಾರನಲ್ಲಿ ವಿವಿಧ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ವಿಶೇಷ ಆಹ್ವಾನಿತರು ಮುಂತಾದವರು ಭಾಗವಹಿಸಿದ್ದರು.