ಕೊರೊನಾ ಸೋಂಕು: ರೈಲ್ವೆ ಸಚಿವ ಸುರೇಶ್ ಅಂಗಡಿ ಇನ್ನಿಲ್ಲ

Share

ದೆಹಲಿ .ಕೇಂದ್ರ ಸರ್ಕಾರದ ರಾಜ್ಯ ರೈಲ್ವೆ ಸಚಿವ ಸುರೇಶ್ ಅಂಗಡಿ (65 )ಅವರು ಕೊರೋನಾ ಸೋಂಕಿನಿಂದ ನಿಧನ ಹೊಂದಿರುವುದಾಗಿ ತಿಳಿಸಲಾಗಿದೆ ಕಳೆದ ಕೆಲವು ದಿನಗಳಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಧ್ಯಾನದ ನಂತರ ತೀವ್ರ ಉಸಿರಾಟದ ತೊಂದರೆಯಿಂದ ಕೊನೆಯುಸಿರೆಳೆದರು ಎಂದು ಹೇಳಲಾಗಿದೆ.

ಸುರೇಶ್ ಅಂಗಡಿಯವರು ಯಾವುದೇ ಕೊರೊನಾ ಸೋಂಕು ಗುಣಲಕ್ಷಣಗಳು ಇಲ್ಲದಿದ್ದರೂ ಪಾಸಿಟಿವ್ ಬಂದಿದ್ದು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು .
ಸಚಿವ ಸುರೇಶ್ ಅಂಗಡಿಯವರು ಜಗದೀಶ್ ಶೆಟ್ಟರ್ ಅವರ ಬಂಧುಗಳು. . ಸುರೇಶ್ ಅಂಗಡಿ ಅವರು ಪತ್ನಿ ಇಬ್ಬರು ಮಕ್ಕಳನ್ನು ಆಗಲಿದ್ದಾರೆ.


Share