ಕೊರೋನಾಗೆ ಐಎಸ್ ಅಧಿಕಾರಿ ಬಲಿ

ಪಶ್ಚಿಮಬಂಗಾಳದಲ್ಲಿ ಮೊದಲಬಾರಿಗೆ ಜಿಲ್ಲಾಧಿಕಾರಿ ಒಬ್ಬರು ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಸೋಮವಾರ ಮೃತಪಟ್ಟಿದ್ದಾರೆ ಎನ್ನಲಾಗಿದೆ. ದೇಬದತ್ತ ರೇ ಎಂಬ ಇವರು ಹೂಗ್ಲಿ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.