ಕೊರೋನಾದಿಂದ ಮೃತಪಟ್ಟ ಪೌರಕಾರ್ಮಿಕರ ಕುಟುಂಬಕ್ಕೆ ಪರಿಹಾರ ವಿತರಣೆ

275
Share


ಕೊರೋನಾದಿಂದ ಮೃತಪಟ್ಟ ಪೌರಕಾರ್ಮಿಕರ ಕುಟುಂಬಕ್ಕೆ ಪರಿಹಾರ ವಿತರಣೆ
ಮೈಸೂರು.:- ಕೋವಿಡ್-19 ನಿಂದ ಮೃತಪಟ್ಟ ಮೈಸೂರಿನ ಮಹಾನಗರ ಪಾಲಿಕೆಯ ಪೌರಕಾರ್ಮಿಕರ ಕುಟುಂಬಕ್ಕೆ ಸೋಮವಾರ ಮಹಾಪೌರರಾದ ತಸ್ನಿಂ ಅವರು ಪರಿಹಾರದ ಚೆಕ್ ವಿತರಿಸಿದರು.
ಮೈಸೂರಿನ ಮಹಾನಗರ ಪಾಲಿಕೆಯ  ಜಯಚಾಮರಾಜೇಂದ್ರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ
ಮೈಸೂರು ಮಹಾನಗರ ಪಾಲಿಕೆಯ ಸಿಬ್ಬಂದಿ ವರ್ಗದಲ್ಲಿ ಕೋವಿಡ್ ಪಾಸಿಟಿವ್ ಬಂದು ಮೃತಪಟ್ಟ ಕುಟುಂಬಕ್ಕೆ ತಲಾ 30 ಲಕ್ಷ ರೂ.  ಪರಿಹಾರದ ಚೆಕ್ ಅನ್ನು ನೀಡಲಾಗಿದೆ. ಮಹಾದೇವ, ಎಸ್.ಜೆ.ಕೃಷ್ಣಮ್ಮ, ವಿ. ಬನ್ನಾರಿ, ಓಬಮ್ಮ, ಶಶಿಕುಮಾರ್ ಮೃತರಾಗಿದ್ದು, ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಓಬಮ್ಮ ಮತ್ತು  ಶಶಿಕುಮಾರ್  ಕುಟುಂಬದ ಸದಸ್ಯರಿಗೆ ಮಹಾಪೌರರಾದ  ತಸ್ನಿಂ ಪರಿಹಾರದ ಚೆಕ್ ನೀಡಿದರು.
ಕಾರ್ಯಕ್ರಮದಲ್ಲಿ ಮೈಸೂರಿನ ಉಪ ಮಹಾಪೌರರಾದ ಶ್ರೀಧರ್, ನಗರ ಪಾಲಿಕೆ ಆಯುಕ್ತರಾದ  ಗುರುದತ್ ಹೆಗಡೆ, ಮೈಸೂರು ನಗರ ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಡಾ.ಜಯಂತ್, ಆರೋಗ್ಯಾಧಿಕಾರಿ ಡಾ.ನಾಗರಾಜ್, ಮೈಸೂರು ನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜೆ.ಗೋಪಿ, ನಗರ ಪಾಲಿಕೆ ಸದಸ್ಯರಾದ ಪ್ರೇಮ ಶಂಕರೇಗೌಡ ಸೇರಿದಂತೆ ಇತರರು ಆಗಮಿಸಿದ್ದರು


Share