ಕೊರೋನಾ: ಚಿತ್ರರಂಗ ಸಂಕಷ್ಟದಲ್ಲಿ ಶೀಘ್ರದಲ್ಲೇ ಶೂಟಿಂಗ್ ಆರಂಭಿಸಲು ಚಿಂತನೆ, ನಟ ಶಿವರಾಜ್ ಕುಮಾರ್

318
Share

ಬೆಂಗಳೂರು .
ಕರ್ನಾಟಕ ರಾಜ್ಯದಲ್ಲಿ ಲಾಕ್ಡೌನ್ ನಿಂದ ಚಿತ್ರರಂಗ ಸಂಕಷ್ಟದಲ್ಲಿ ಸಿಲುಕಿ ನರಳುತ್ತಿದೆ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದ್ದಾರೆ.
ಅವರು ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸದ್ಯದಲ್ಲೇ ಶೂಟಿಂಗನ್ನು ಆರಂಭಿಸಲು ಚಿಂತಿಸಲಾಗಿದೆ ಎಂದು ಅವರು ಹೇಳಿದರು. ಶೂಟಿಂಗ್ ಆರಂಭಕ್ಕೆ ಮುನ್ನ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ವಹಿಸಲಾಗುತ್ತದೆ ಎಂದರು. ಈಗಾಗಲೇ ನಟ ಸುದೀಪ್ ಅವರು ಶೂಟಿಂಗ್ ಆರಂಭಿಸಿದ್ದಾರೆ ಎಂದ ಅವರು ರಾಜ್ಯದ ಚಲನಚಿತ್ರ ರಂಗದವರು ಯಾರು ದೃತಿಗೆಡಬಾರದು, ನಾವೆಲ್ಲರೂ ಒಗ್ಗಟ್ಟಾಗಿ ರೋಣ ಕೋರೋನ ಸೋಂಕಿನ ವಿರುದ್ಧ ಹೋರಾಡೋಣ ಎಂದು ಚಲನಚಿತ್ರರಂಗದ ವಲಯಕ್ಕೆ ನಟ ಶಿವರಾಜ್ ಕುಮಾರ್ ಅವರು ಮನವಿ ಮಾಡಿದ್ದಾರೆ.


Share