ಕೊರೋನಾ: ಮುಖ್ಯಮಂತ್ರಿ ಬಿಎಸ್ ವೈಗೆ ಸೋಂಕು ದೃಢ.

Share

ಬೆಂಗಳೂರು -ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಕರೋನಾ ಸೋಂಕು ದೃಢಪಟ್ಟಿದ್ದು ಮುಖ್ಯಮಂತ್ರಿಗಳು ಟ್ವೀಟ್ ಮೂಲಕ ತಿಳಿಸಿದ್ದಾರೆ .

ಅವರು ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ .ತಮ್ಮ ಜೊತೆ ಸಂಪರ್ಕದಲ್ಲಿ ದವರೆಲ್ಲರೂ ಕರೋನಾ ಪರೀಕ್ಷೆಗೆ ಒಳಗಾಗಬೇಕೆಂದು ಸಿಎಂ ಕೋರಿದ್ದಾರೆ . ಯಡಿಯೂರಪ್ಪ ಅವರು ಹಗಲಿರುಳು ಶ್ರಮವಹಿಸಿ ಸಂಕಷ್ಟ ಸ್ಥಿತಿಯಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ .ಅವರು ಹುಟ್ಟು ಹೋರಾಟಗಾರರು .ರಾಜ್ಯದ ಜನತೆ ಸದಾ ಅವರ ಜತೆ ಇರುತ್ತಾರೆ, ಅವರು ಶೀಘ್ರ ಗುಣಮುಖರಾಗಲೆಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಟ್ವಿಟ್ಟರ್ ಮುಖಾಂತರ ಯಡಿಯೂರಪ್ಪ ಅವರಿಗೆ ಹಾರೈಸಿದ್ದಾರೆ .ಈ ವಿಷಯ ತಿಳಿಯುತ್ತಿದ್ದಂತೆ ಯಡಿಯೂರಪ್ಪ ಅವರ ಸಚಿವ ಸಂಪುಟದ ಸಹೋದ್ಯೋಗಿಗಳೆಲ್ಲ ಅವರು ಶೀಘ್ರ ಗುಣ ಮುಖ ಆಗಲೆಂದು ಪ್ರಾರ್ಥಿಸುತ್ತಿದ್ದಾರೆ .


Share