ಕೊರೋನಾ: ಹಬ್ಬದ ಮೂಲಕ ಅರಿವು ಮೂಡಿಸಿದ ಮಹಿಳೆಯರು

Share

ಕೂರೋನಾ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವರಮಹಾಲಕ್ಷ್ಮಿ ಹಬ್ಬವನ್ನು ಸರಳವಾಗಿ ಆಚರಿಸುವ ನಿಟ್ಟಿನಲ್ಲಿ ಮೈಸೂರು ನಗರ
ಬಿಜೆಪಿ
ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ರೇಣುಕಾ ರಾಜು
ಜೆಎಸ್ಎಸ್ ಲೇಔಟ್ ನಲ್ಲಿರುವ ಅವರ ನಿವಾಸದಲ್ಲಿ ಆಚರಿಸಿದರು, ಅವರ ನಿವಾಸದಲ್ಲಿ ಪೂಜೆಗೆ ಬಂದ ಮಹಿಳೆಯರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಿ ಕೂರೂನಾ ಜಾಗೃತಿಯ ಭಿತ್ತಿಪತ್ರ ಪ್ರದರ್ಶಿಸುವ ಮೂಲಕ ಮನೆಯಲ್ಲೇ ಜನರಿಗೆ ಸಂದೇಶ ನೀಡುವ ನಿಟ್ಟಿನಲ್ಲಿ ಅರ್ಥಪೂರ್ಣವಾಗಿ ವರಮಹಾಲಕ್ಷ್ಮಿ ವೃತ ಆಚರಿಸಲಾಯಿತು,
ನಂತರ ಮಾತನಾಡಿದ ಮೈಸೂರು ನಗರ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರೇಣುಕಾ ರಾಜ್
ನಾವು ಪ್ರತಿ ವರ್ಷ ನಮ್ಮ ಮನೆಯಲ್ಲಿ ಆಡಂಬರವಾಗಿ ಆಚರಿಸಿಕೊಂಡು ಬರುತ್ತಿದ್ದು ಈ ವರ್ಷ ಮಹಾಮಾರಿ ಕೂರೂನಾ ಹಿನ್ನೆಲೆಯಲ್ಲಿ ಸಾಂಪ್ರದಾಯಿಕವಾಗಿ ಆಚರಿಸುತ್ತಿದ್ದೆವೆ ಬಂದಂತ ಮಹಿಳೆಯರಿಗೆ ತಾಂಬೂಲ ಜೊತೆ ಒಂದು ಮಾಸ್ಕ್ ವಿತರಿಸಿ ಅವರಿಗೂ ಸಹ ಜಾಗೃತಿ ಮೂಡಿಸುತ್ತಿದ್ದೇವೆ ಮೈಸೂರಿನಲ್ಲಿ ದಿನೇ ದಿನೇ ಮಹಾಮಾರಿ ಕೂರೂನಾ ಹೆಚ್ಚುತ್ತಿದೆ ನಮಗೂ ಸಹ ಆತಂಕವಾಗುತ್ತಿದೆ ಸರ್ಕಾರ ನೀಡಿರುವ ಮಾರ್ಗಸೂಚನೆ ನಿಯಮಗಳನ್ನು ತಪ್ಪದೇ ಪಾಲಿಸಿ ಸರ್ಕಾರದವರು ಮಾಡುತ್ತಿರುವುದು ನಮ್ಮಗಳ ಒಳಿತಿಗಾಗಿ ಎಂದು ಅರಿತುಕೊಳ್ಳಬೇಕು ಎಂದು ಮನವಿ ಮಾಡಿದರು ಮುಂಬರುವ ಗಣೇಶ ಗೌರಿ ಹಬ್ಬವನ್ನು ಸಹ ಸರಳವಾಗಿ ಆಚರಿಸಿ ಹಬ್ಬದ ಖರ್ಚಿನ ಹಣವನ್ನು ಅಸಹಾಯಕರಿಗೆ ಉಳ್ಳವರು ಇಲ್ಲದವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಹಬ್ಬವನ್ನು ಸರಳವಾಗಿ ಆಚರಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು
ಇದೇ ಸಂದರ್ಭದಲ್ಲಿ ಮೈಸೂರು ನಗರ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರೇಣುಕಾ ರಾಜ್, ಸ್ನೇಹಿತರಾದ ಸಂಗೀತ ,ರಶ್ಮಿ, ಸುಧಾ, ಬೇಬಿ, ದ್ರಾಕ್ಷಾಯಿಣಿ, ಭವಾನಿ,ಮನಿ, ಶಿಲ್ಪ, ಶಿವಮ್ಮ, ಹಾಗೂ ಇನ್ನಿತರರು ಹಾಜರಿದ್ದರು


Share