ಸಚಿವ ಆನಂದ್ ಸಿಂಗ್ ಸ್ಪಷ್ಟನೆ

382
Share

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಳವಾಗುತ್ತಿದ್ದು, ಸಚಿವ ಸಿ ಟಿ ರವಿ ನಂತರ ಇದೀಗ ಸಚಿವ ಆನಂದ್ ಸಿಂಗ್ ಗೂ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.

ಸಚಿವ ಆನಂದ್ ಸಿಂಗ್ ಅವರು ಕೊರೊನಾ ವೈರಸ್ ಟೆಸ್ಟ್ ಮಾಡಿಸಿದ್ದರು. ನಿನ್ನೆ ರಾತ್ರಿ ವರದಿಯಲ್ಲಿ ಆನಂದ್ ಸಿಂಗ್ ಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ.

ಆನಂದ್ ಸಿಂಗ್ ಗೆ ಕೊರೊನಾ ಲಕ್ಷಣಗಳಿಲ್ಲದಿದ್ದರೂ ಪಾಸಿಟಿವ್ ಬಂದಿದೆ.ಹೀಗಾಗಿ ಹೊಸಪೇಟೆಯ ತಮ್ಮ ನಿವಾಸದಲ್ಲಿ ಆನಂದ್ ಸಿಂಗ್ ಚಿಕಿತ್ಸೆ ಪಡೆಯುತ್ತಿದ್ದಾರೆಯಾವುದೇ ರೋಗ ಲಕ್ಷಣಗಳಿಲ್ಲದಿರುವುದರಿಂದ ಹೊಸಪೇಟೆ ನಗರದ ತಮ್ಮ ನಿವಾಸದಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕುಟುಂಬ ಮೂಲಗಳಿಂದ ಮಾಹಿತಿ ದೊರೆತಿದೆ. ಈ ಕುರಿತು ಜಿಲ್ಲಾಡಳಿತ ಅಥವಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇನ್ನೂ ಖಚಿತ ಪಡಿಸಿಲ್ಲ.


Share