ಕೋರೊನ: ಮೈಸೂರು ಪಾಲಿಕೆ ಕಾರ್ಪೊರೇಟರ್ ಗೆ,ಸೊ೦ಕು ದೃಡ.

Share

ಮೈಸೂರು ನಗರ ಪಾಲಿಕೆಯ ವಾರ್ಡ್ ಇಪ್ಪತ್ತ್ನಾಲ್ಕು ಪುರಪಿತೃ ಶ್ರೀ ರಮಣಿ ರಮೇಶ್ ಅವರಿಗೆ ಕರೋನಾ ಪಾಸಿಟಿವ್ ಬಂದಿದೆ ಎಂದು ಅವರನ್ನು ಕ್ವಾರಂಟೈನ್ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗಿದೆ .ಮಿತ ಭಾಷಿ ಜನಾನುರಾಗಿ ರಮೇಶ್ ಅವರು ಎರಡನೆಯ ಬಾರಿಗೆ ನಗರ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.ಬಿಎನ್ ರಸ್ತೆ ದತ್ತಾತ್ರೇಯ ಸ್ವಾಮಿ ದೇವಸ್ಥಾನ ಬಳಿ ಇರುವ ಇವರ ನಿವಾಸದಿಂದ ಇಂದು ಅವರನ್ನು ಕ್ವಾರಂಟೈನ್ ಹೊಂಗೆ ಸ್ಥಳಾಂತರಿಸಲಾಯಿತು ಎಂದು ತಿಳಿದು ಬಂದಿದೆ .ನಗರ ಪಾಲಿಕೆಯ ಝೋನ್ ಆರು ರ ವ್ಯಾಪ್ತಿಗೆ ಒಳಪಡುವ ಇವರ ನಿವಾಸದ ಸ್ಥಳವನ್ನು ಸೀಲ್ ಡೌನ್ ಮಾಡಲು ಕ್ರಮ ಕೈಗೊಳ್ಳಲಾಗಿದೆ.ಇತ್ತೀಚೆಗಷ್ಟೇ ಇವರು ಹೃದಯ ಸಂಬಂಧಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ ಎಂದು ಹೇಳಲಾಗಿದ್ದು ಇವರ ಜತೆ ಪ್ರತಿನಿತ್ಯ ಒಡನಾಟದಲ್ಲಿದ್ದ ಕಾರ್ಯಕರ್ತರನ್ನು ಮನೆಯವರನ್ನು ಈಗಕೋವಿದ್ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಗೊತ್ತಾಗಿದೆ


Share