ಕೋರೋಣ:ಹಾಸನ 2 ಜೋನ್ 28 ದಿನ ನಿರ್ಬಂಧ

271
Share

ಎರೆಡು ಕಂಟೈನ್ಮೆಂಟ್ ಜೋನ್: 28 ದಿನಗಳ ನಿರ್ಬಂಧ
ಹಾಸನ ಮೇ 24 : (ಕರ್ನಾಟಕ ವಾರ್ತೆ ) ನಗರದಲ್ಲಿ ಇಂದು ಸ್ಥಳೀಯವಾದ ಎರೆಡು ಕೊವಿದ್ 19 ಪ್ರಕರಣ ಪತ್ತೆಯಾಗಿದ್ದು ಅವರು ವಾಸಿಸುತಿದ್ದ ಪ್ರದೇಶಗಳನ್ನು ಕಂಟೈನ್ಮೆಂಟ್ ಪ್ರದೇಶವೆಂದು ಘೋಷಿಸಲಾಗಿದೆ.
ನಗರದ‌ ಇಂದಿರಾ ನಗರದ ಎರಡನೇ ಕ್ರಾಸ್ ಮತ್ತು ಉತ್ತರ ಬಡಾವಣೆಯ ಅರಳಿ ಮರ ವೃತ್ತದ ಆಸುಪಾಸಿನ ವಲಯವನ್ನು ಪೋಲೀಸ್ ಭದ್ರತೆ ಯೊಂದಿಗೆ ಕಂಟೈನ್ಮೆಂಟ್ ಮಾಡಲಾಗಿದೆ. ಈ ಪ್ರದೇಶದಲ್ಲಿ 28 ದಿನಗಳ ಕಾಲ ಯಾರಿಗೂ ಹೊರಗಿನಿಂದ‌ ಒಳಕ್ಕೆ ಅಥವಾ ಒಳಗಿನಿಂದ ಹೊರಕ್ಕೆ ಒಡಾಡಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು .
ನಾಗರೀಕರಿಗೆ ಈ ಬಗ್ಗೆ ಮನವರಿಕೆ‌ ಮಾಡಿಕೊಡಲಾಗಿದೆ .ಈ ಪ್ರದೇಶಗಳಿ ಇನ್ಸಿಡೆಂಟ್‌ ಕಮಾಂಡರ್ ಎಂಬ ಅಧಿಕಾರಿಗಳನ್ನು ನೇಮಿಸಲಾಗಿದ್ದು ಅವರು ಈ ಪ್ರದೇಶಗಳ ಘಟನೆಗಳ ಮೇಲ್ವಿಚಾರಣೆ ನಡೆಸಲಿದ್ದಾರೆ .
ಹಾಸನ ನಗರದಲ್ಲೇ ವಾಸವಿದ್ದವರಲ್ಲಿ ಸೋಂಕು ಕ‌ಂಡು ಬಂದಿರುವುದರಿಂದ ಪ್ರತಿಯೊಬ್ಬರು ಜಿಲ್ಲಾಡಳಿತದ ನಿರ್ಧಾರಕ್ಕೆ ಸಹಕಾರ ನೀಡಬೇಕು .ತಮ್ಮ ಸುರಕ್ಷತೆ ಗಮನಿಸುವ ಜೊತೆಗೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಮನವಿ ಮಾಡಿದ್ದಾರೆ


Share