ಕೊರೋನಾ ಕೊನೆಯಾಗುವ ತನಕ ಕಾರ್ಯಕರ್ತರು ಜನರ ನೋವಿಗೆ ದನಿಯಾಗಿ-ಎಂ ಕೆ ಸೋಮಶೇಖರ್
ಡಿಕೆ ಶಿವಕುಮಾರ್ ರವರ ಪದಗ್ರಹಣ ಹಿನ್ನೆಲೆ ಕರೆದಿದ್ದ ಎರಡನೇ ಪೂರ್ವಭಾವಿ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಎಂ ಕೆ ಸೋಮಶೇಖರ್ ರವರು ಕೇಂದ್ರ ರಾಜ್ಯ ಸರ್ಕಾರಗಳೂ ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡರು ಅವರ ಜೊತೆ ಕೈ ಜೋಡಿಸಿ ಜನರ ಸಂಕಷ್ಟಗಳನ್ನು ಪರಿಹರಿಸುವ ಪ್ರಯತ್ನ ನಮ್ಮಿಂದ ಆಗಬೇಕಿದೆ.ಬಡ ಕೂಲಿಕಾರ್ಮಿಕರ ಕಣ್ಣೀರೊರಸುವಲ್ಲಿ ಕೇಂದ್ರ ರಾಜ್ಯ ಸರ್ಕಾರಗಳು ವಿಫಲವಾಗಿವೆ.ಪ್ಯಾಕೇಜ್ ಗಳು ಕೇವಲ ಪತ್ರಿಕೆಗಳಲ್ಲಿ ಟಿವಿಗಳಷ್ಟೇ ಪತ್ರಿಕಾಗೋಷ್ಠಿಗಳಷ್ಟೇ ಕೇಳುತ್ತಿದ್ದೇವೆ ಹೊರತು ಜನರ ಬಳಿ ತಲುಪುತಿಲ್ಲ.ಇಂತಹ ಸನ್ನಿವೇಶದಲ್ಲಿ ನಮ್ಮ ನಾಯಕರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ರವರ ಬಡವರು,ಕೂಲಿಕಾರ್ಮಿಕರು,ವಲಸಿಗರ ಬಗೆಗಿನ ಕಾಳಜಿ ಶ್ಲಾಘನೀಯ.ನಮ್ಮ ಪಕ್ಷ ಲಾಕ್ ಡೌನ್ ನಿಂದ ಇಲ್ಲಿಯ ತನಕ ರಾಜಕೀಯ ಮಾಡದೆ ಜನರ ನೋವಿಗೆ ದನಿಯಾಗಿದೆ.ಆದ್ದರಿಂದ ಕಾರ್ಯಕರ್ತರೂ ಪಕ್ಷದ ವರಿಷ್ಠರ ನಿಲುವುಗಳನ್ನು ಗೌರವಿಸಿ ಪಾಲಿಸಿ ಜನರ ಮಧ್ಯದಲ್ಲಿದ್ದು ದುಡಿಯಬೇಕಾದ ಅನಿವಾರ್ಯತೆ ಇದೆ.ಇದುವರೆಗೂ ಸ್ವಾರ್ಥ ಬಿಟ್ಟು ದುಡಿಯುತ್ತಿರುವ ನನ್ನೆಲ್ಲಾ ಕಾರ್ಯಕರ್ತರಿಗೂ ನಾನು ಚಿರರುಣಿಯಾಗಿದ್ದೇನೆ.ಮುಂದಿನ ಏಳನೇ ತಾರೀಖು ಡಿಕೆಶಿ ಯವರ ಪದಗ್ರಹಣ ಕಾರ್ಯಕ್ರಮವನ್ನು ಪಕ್ಷದ ಆದೇಶದಂತೆ ಶ್ರದ್ಧೆಯಿಂದ ಪ್ರತಿ ವಾರ್ಡ್ ನಲ್ಲಿ ವ್ಯವಸ್ಥಿತವಾಗಿ ಮಾಡೋಣ ಎಂದು ತಿಳಿಸಿದರು.