ಕೋರೋನ ಸೋಂಕಿತರನ್ನು ಅವಮಾನಿಸಬೇಡಿ

ಸೋಂಕಿತರನ್ನು ಅವಮಾನಿಸಬೇಡಿ

‘ಕೊರೊನಾ ಸೋಂಕಿತರ ಬಗ್ಗೆ ಅಪಪ್ರಚಾರ ಮಾಡಿ, ಅವಮಾನಿಸಬೇಡಿ. ಸೋಂಕಿತರು ಯಾವ ತಪ್ಪೂ ಮಾಡಿಲ್ಲ. ಅವರ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು, ಉಗ್ರಗಾಮಿಗಳಂತೆ ಚಿತ್ರಿಸಬೇಡಿ’ ಎಂದು
ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್
ವಿನಮ್ರವಾಗಿ ಮನವಿ ಮಾಡಿದರು.

ಕೊರೊನಾ ಸೋಂಕಿತರಿಗೆ ಕುಟುಂಬವಿದೆ, ಅವರಿಗೂ ಒಂದು ಸುಂದರ ಬದುಕಿದೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಸೋಂಕು ಯಾರಿಗೆ ಬೇಕಾದರೂ ತಗುಲಬಹುದು. ಅದಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಿದೆ. ಆದರೆ, ಕೆಲವರ ಮನಸ್ಸಿಗೆ ಅಂಟಿದ ವಿಕೃತಿಯನ್ನು ಹೋಗಲಾಡಿಸಬೇಕಿದೆ ಎಂದು ಸೋಂಕಿತರು ಪಟ್ಟ ಅವಮಾನ, ನೋವುಗಳನ್ನು ಕೇಳಿ ಬರುತ್ತಿದೆ
ದಯಮಾಡಿ ಕ್ವಾರಂಟೈನ್ ಹಾಗೂ ಸೋಂಕಿತರನ್ನು ಅವಮಾನಿಸಬೇಡಿ ಪ್ರೀತಿಸಿ

ಸೋಂಕಿಗೆ ಹೆದರುವ ಅಗತ್ಯವಿಲ್ಲ. ಮುನ್ನೆಚ್ಚರಿಕೆ ವಹಿಸಿದರೆ ಸಾಕು. ಅಕಸ್ಮಾತ್‌ ಸೋಂಕು ತಗುಲಿದರೂ ಧೈರ್ಯವಾಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಗುಣಮುಖರಾಗಿ. ಸುರಕ್ಷತಾ ನಿಯಮ ಪಾಲಿಸುವ ಮೂಲಕ ನೀವು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಿ.ಎಂದು ಮನವಿ ಮಾಡಿದ್ದಾರೆ

ಇಂತಿ ವಿಕ್ರಮ್ ಐಯಂಗಾರ್ ಅಧ್ಯಕ್ಷರು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಮೈಸೂರು