ಕೋರೋನ ಹಾಸನ ಮತ್ತೆ 14 ಹೊಸ ಪ್ರಕರಣ ದಾಖಲು

345
Share

ಹಾಸನದಲ್ಲಿ ಮತ್ತೆ 14 ಹೊಸ ಪ್ರಕರಣ: ಸೋಂಕಿತರ ಸಂಖ್ಯೆ 98ಕ್ಕೆ ಏರಿಕೆ
ಹಾಸನ ಮೇ‌24: (ಕರ್ನಾಟಕ ವಾರ್ತೆ) ಹಾಸನ ಜಿಲ್ಲೆಯಲ್ಲಿ ಹೊಸದಾಗಿ 14 ಕೋವಿದ್ 19 ಪ್ರಕರಣ ಪತ್ತೆಯಾಗಿದೆ ಇದರೊಂದಿಗೆ ಜಿಲ್ಲೆಯಲ್ಲಿ ಇರುವ ಸೋಂಕಿತರ ಸಂಖ್ಯೆ 98ಕ್ಕೆ‌ ಏರಿಕೆಯಾಗಿದೆ .
ಈ ವರಗೆ ಮಹಾರಾಷ್ಟ್ರ ದಿಂದ ಬಂದವರಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದ ‌ಸೋಂಕು ಇಂದು ಜಿಲ್ಲೆಯ ನಿವಾಸಿಗಳಲ್ಲೂ ಪತ್ತೆ ಯಾಗಿದೆ .ಹಾಸನ‌ ನಗರದಲ್ಲಿ ಎರೆಡು ಪ್ರಕರಣ ದಾಖಲಾಗಿದ್ದು ಏರೆಡು ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ.
ಇಂದು ವರದಿಯಾದ ಪ್ರಕರಣಗಳಲ್ಲಿ 11ಪ್ರಕರಣಗಳಿಗೆ ಮಹಾರಾಷ್ಟ್ರ ದಿಂದ ಪ್ರಯಾಣಿಸಿದ ಹಿನ್ನಲೆ ಇದೆ .ಇನ್ನು ಉಳಿದ ಮೂವರಲ್ಲಿ ಒಬ್ಬ ಹಾಸನ ನಗರದ ನಿವಾಸಿ
ಕೆ.ಏಸ್ ಆರ್ ಪಿ ಕಾನ್ಸ್ ಟೆಬಲ್ ಬೆಂಗಳೂರಿಗೆ ಸರ್ಕಾರಿ ವಾಹನದಲ್ಲೇ ಕರ್ತವ್ಯ ನಿಮಿತ್ತ ಪ್ರಯಾಣ ಮಾಡಿ ಬಂದ ಹಿನ್ನಲೆ ಹೊಂದಿದ್ದು ನಗರದ ಮತ್ತೊಬ್ಬ ಸೋಂಕಿತ ಮಹಿಳೆ ಕೂಡ ಬೆಂಗಳೂರು ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ.
ಇನ್ನೊಬ್ಬರು ಮಂಗಳೂರು ಮೂಲದ ಬೆಂಗಳೂರಿನ ಕಾರ್ಮಿಕ ಲಾಕ್ ಡೌನ್ ವೇಳೆ ಹಾಸನಕ್ಕೆ ಅಗಮಿಸಿ ಜಿಲ್ಲಾ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಟ್ಟಿದ್ದು ಮೊದಲ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ಕಾರಣ ಕ್ವಾರಂಟೈನ್ ಕೇಂದ್ರಕ್ಕೆ ಕಳಿಲಾಗಿತ್ತು 12 ನೇ ದಿನದ ಎರಡನೇ ತಪಾಸಣೆ ಯಲ್ಲಿ ‌ಅತನಲ್ಲಿ ಕೊರೋನಾ ಸೋಂಕು ಧೃಡಪಟ್ಟಿದೆ ಎಂದು ಜಿಲ್ಲಾಧಿಕಾರಿ ಆರ್ .ಗಿರೀಶ್ ತಿಳಿಸಿದ್ದಾರೆ


Share