ಕೋವಿಡ್ ವಾರ್ಡಿನಲ್ಲಿ ಹಾಡು -ಯೋಗ : ಆತ್ಮ ವಿಶ್ವಾಸದಿಂದ ಕೊರೊನಾ ಎದುರಿಸುತ್ತಿರುವ ಬಳ್ಳಾರಿಗರು.

Share

ಕೋವಿಡ್ ವಾರ್ಡಿನಲ್ಲಿ ಹಾಡು -ಯೋಗ : ಆತ್ಮ ವಿಶ್ವಾಸದಿಂದ ಕೊರೊನಾ ಎದುರಿಸುತ್ತಿರುವ ಬಳ್ಳಾರಿಗರು
ಬಳ್ಳಾರಿ : “ಜೊತೆಗಿರು ನೀನು ಅಪ್ಪನ ಹಾಗೆ, ಹಣ್ಣೆಲೆ ಕಾಯೊ ವಿನಯದಿ ಹೀಗೆ” ಎಂದು ಹಾಡಿನ ಸಾಲುಗಳನ್ನು  ಕೊರೊನಾ ಸೋಂಕಿತನೊಬ್ಬ ಹಾಡಿ ವಾರ್ಡಿನಲ್ಲಿದ್ದ ಇತರ ರೋಗಿಗಳನ್ನು ರಂಜಿಸಿದ್ದಾನೆ.
ಬಳ್ಳಾರಿಯ ವಿಮ್ಸ್  ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ  ಯುವಕನೊಬ್ಬ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಬೌಮ ರಾಜಕುಮಾರ ಚಿತ್ರದ “ಬೊಂಬೆ ಹೇಳುತೈತೆ” ಎಂಬ ಹಾಡನ್ನು ಹಾಡಿ ತನ್ನ ಸಹವರ್ತಿಗಳನ್ನು ರಂಜಿಸಿದ್ದು ಇತರೆ ರೋಗಿಗಳು ಚಪ್ಪಾಳೆ ತಟ್ಟುತ್ತಾ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿ ಖುಷಿ ಪಟ್ಟಿದ್ದಾರೆ.  ಅದರಂತೆ ಸೋಂಕಿತರಿಗೆ ಯೋಗ ಪ್ರಾಣಾಯಾಮವನ್ನು ಮಾಡಿಸುವ ಮೂಲಕ ಸೋಂಕಿತರಲ್ಲಿ ಆತ್ಮವಿಶ್ವಾಸ ಹಾಗೂ ರೋಗದ ವಿರುದ್ಧ ಹೋರಾಡಲು ಶಕ್ತಿ ತುಂಬುವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು. ಈ ವಿಡಿಯೋ ತುಣುಕುಗಳನ್ನು ಸ್ವತಃ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. 
ಜಿಲ್ಲೆಯಲ್ಲಿ  ಕೊರೊನಾ ಅಟ್ಟಹಾಸ  ಅತಿ ಹೆಚ್ಚಾಗಿದ್ದು ಸುಮಾರು 18 ಸಾವಿರಕ್ಕೂ ಮೀರಿ ಪ್ರಕರಣಗಳು ವರದಿಯಾಗಿದ್ದು, 5 ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ.  ಸೋಂಕಿತರು ಹೆಚ್ಚುತ್ತಲೆ ಇದ್ದು ಅದರಂತೆ ಗುಣಮುಖರಾಗಿ ಬಿಡುಗಡೆಯಾಗುತ್ತಿರುವವರ ಸಂಖ್ಯೆಯು ದಿನೇದಿನೇ ಹೆಚ್ಚುತ್ತಿದ್ದು.   ಜಿಲ್ಲಾಡಳಿದ ದಿಟ್ಟ ಹಾಗೂ ಸಮಯೋಚಿತ ನಿರ್ಧಾರಗಳಿಂದ ಸಾಂಕ್ರಾಮಿಕ ರೋಗ  ಕೊರೊನಾ ನಿಯಂತ್ರಿಸಲು ಸಾಧ್ಯವಾಗಿದೆ ಎಂಬುದು ಕೆಲವರ ಅಭಿಪ್ರಾಯ


Share