ಕೋವಿಡ್-19 ತಡೆಗಟ್ಟಲು ಜಾಗೃತಿ ಮೂಡಿಸುವ ಪ್ರಚಾರ ವಾಹನಕ್ಕೆ. ಶಾಸಕ ರಾಮದಾಸ್ ಚಾಲನೆ.

Share

ಮೈಸೂರು
ಕೋವಿಡ್-19 ತಡೆಗಟ್ಟಲು ಜಾಗೃತಿ ಮೂಡಿಸುವ ಸಲುವಾಗಿ ಪ್ರಚಾರ ವಾಹನಕ್ಕೆ ಶಾಸಕರಾದ ಎಸ್.ಎ.ರಾಮದಾಸ್ ರವರಿಂದ ರಿಂದ ಚಾಲನೆ.
ಚಾಲನೆ ನಂತರ ಮಾತನಾಡಿದ ಶಾಸಕರಾದ ಎಸ್.ಎ.ರಾಮದಾಸ್ ರವರು ಇವತ್ತು ದೇಶಾಧ್ಯಂತ ಕೋರೋನ ಮಾರಿ ಇನ್ನು ಕಾಡುತ್ತಿದಯೋ ಅದರಿಂದ ಹೊರಗಡೆ ಬರಲು ತಡೆಗಟ್ಟುವ ಸಲುವಾಗಿ ಜಾಗೃತಿ ಮೂಡಿಸುವ ಸಲುವಾಗಿ ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯ, ನಿಮ್ಹಾನ್ಸ್, ವಾರ್ತಾ ಮತ್ತು ಪ್ರಸಾರ ಇಲಾಖೆಯ ನೇತೃತ್ವದಲ್ಲಿ ಆರೋಗ್ಯ ಸಚಿವಾಲಯ, ನಿಮ್ಹಾನ್ಸ್ ಸಹಾಕಾರದೊಂದಿಗೆ ದೇಶಾಧ್ಯಂತ ಜಾಗೃತಿ ಮೂಡಿವ ಕಾರ್ಯಕ್ರಮ ಏಕಕಾಲಕ್ಕೆ ಚಾಲನೆಗೊಳ್ಳಲಿದ್ದು, ಮೈಸೂರಿನಲ್ಲಿ ಕೃಷ್ಣರಾಜ ಕ್ಷೇತ್ರದಿಂದ ಪ್ರಚಾರ ವಾಹನಕ್ಕೆ ಹಸಿರು ಬಾವುಟ ಹಾರಿಸುವ ಮೂಲಕ ಚಾಲನೆಗೊಳಿಸಲಾಯಿತು. ಮೈಸೂರು ನಗರ ಸೇರಿದಂತೆ, ಗ್ರಾಮಂತರ ಭಾಗಗಳಲ್ಲಿ ಮಾಸ್ಕ್ ಯಾಕೆ ಹಾಕಬೇಕು, ಇದರಿಂದ ಹೇಗೆ ಉಪಯೋಗವಾಗಲಿದೆ, ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸಲು ಏನೇನು ಮಾಡಬೇಕು, ಹಿರಿಯ ನಾಗರೀಕರ ಆರೋಗ್ಯದ ಕಾಳಜಿ ಹೇಗೆ ವಹಿಸಬೇಕು ಎನ್ನುವ ವಿಷಯಗಳ ಮಾಹಿತಿ ಇರುವ ಆಡಿಯೋ ಮೂಲಕ ಜಾಗೃತಿ ಮೂಡಿಸುವ ಕಾರ್ಯ ನಡೆಯಲಿದೆ.
ಮಾನ್ಯ ಪ್ರಧಾನ ಮಂತ್ರಿಗಳು ನವೆಂಬರ್ ತಿಂಗಳವರೆಗೂ ಪಡಿತರ ವ್ಯವಸ್ಥೆ ಕಲ್ಪಿಸಿದ್ದು ಬರುವ ದಿನಗಳಲ್ಲಿ ಕೋವಿಡ್ ಪ್ರಕರಣಗಳು ಕಡೆಮೆಯಾಗುವ ವಿಶ್ವಾಸ ಮೂಡುತ್ತಿದ್ದರು ಸಾವಿನ ಸಂಖ್ಯೆ ಕಡಿಮೆಯಾಗುವ ದೃಷ್ಠಿಯಿಂದ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕಿದ್ದು ರೋಗ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಹೆಚ್ಚು ಆಗಬೇಕಿದೆ. ಇಂದು ಚಾಲನೆಗೊಂಡ ಜಾಗೃತಿ ಕಾರ್ಯಕ್ರಮದಿಂದ ಸಾರ್ವಜನಿಕರಿಗೆ ಹೆಚ್ಚಿನ ರೀತಿಯಲ್ಲಿ ಸಹಾಯವಾಗಲಿ ಎಂದು ಆಶಿಸಿದರು. ದೇಶಾದ್ಯಂತ ಕೋರೋನ ಮುಕ್ತವಾಗಲಿ ಎಂದು ಬೇಡುತ್ತೇನೆ ಎಂದು ಶಾಸಕರು ತಿಳಿಸಿದರು. ಈ ಕಾರ್ಯಕ್ರದಲ್ಲಿ ಕ್ಷೇತ್ರ ಜನಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ಡಾ. ಪೂರ್ಣಿಮಾ (ಐ.ಐ.ಎಸ್) ರವರು ಉಪಸ್ಥಿತರಿದ್ದರು.


Share