ಕೋವಿಡ್ 19: ಸಂತ್ರಸ್ತರಿಗೆ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

Share

ಮೈಸೂರು ,ಮಾರ್ಚ್ 23 ರಿಂದ 1 ಆರಂಭವಾದ ಕೋವಿಡ್ -19 ಲಾಕ್ಷೌನ್ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕತೆಯು ತೀವ್ರ ರೀತಿಯ ಸಂಕಷ್ಟಕ್ಕೆ ಸಿಲುಕಿದೆ . ರಾಜ್ಯದ ಸಂಘಟಿತ ವಲಯದ ಕೈಗಾರಿಕಾ ಕಾರ್ಮಿಕರು , ಅಸಂಘಟಿತ ಕಾರ್ಮಿಕರು , ರೈತಾಪಿ ಜನತೆ ಹಾಗೂ ಇತರೆ ಎಲ್ಲಾ ವಿಭಾಗದ ಜನತೆಯು ಇದರಿಂದಾಗಿ ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ . ಒಂದೆಡೆ ಕೋವಿಡ್ -194 ಸಾಂಕ್ರಾಮಿಕದ ಆತಂಕ ಇರುವಾಗಲೇ ಇನ್ನೊಂದೆಡೆ ಅನ್‌ಲಾಕ್ 4.0 ಜಾರಿಯಲ್ಲಿದ್ದರೂ ರಾಜ್ಯದ ಆರ್ಥಿಕ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಪುನಶ್ವೇತನಗೊಳ್ಳದ ಕಾರಣ ಆರ್ಥಿಕ ಸಂಕಷ್ಟವನ್ನು ಜನತೆ ಎದುರಿಸುವಂತಾಗಿದೆ . ಕೋವಿಡ್ -19 ಸೋಂಕು ಹೆಚ್ಚುತ್ತಿದ್ದು 5 ಲಕ್ಷದೆಡೆಗೆ ನಡೆದಿದೆ . ಸಕ್ರಿಯ ಪ್ರಕರಣಗಳು ಹೆಚ್ಚಿವೆ . ಪರಿಣಾಮವಾಗಿ ಜನತೆ ಆತಂಕದಿಂದಲೇ ಆರ್ಥಿಕ ಚಟುವಟಿಕೆಗಳಲ್ಲಿ ಮತ್ತು ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಿಕೊಳ್ಳುವಂತಾಗಿದೆ . ಎಂದು ಸಿಐಟಿಯು ಕಾರ್ಯಕರ್ತರು ಮೈಸೂರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವ ವೇಳೆ ತಿಳಿಸಿದರು.


Share