ಕ್ರೀಡಾಪಟುಗಳಿಗೆ ನಗದು ಪುರಸ್ಕಾರ

685
Share

ಮಂಗಳೂರು :- 2018 ಮತ್ತು 2019ನೇ ಸಾಲಿನಲ್ಲಿರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಪದಕ ಪಡೆದಕರ್ನಾಟಕದ ಕ್ರೀಡಾಪಟುಗಳು ಮತ್ತು ಭಾರತ ಸರ್ಕಾರದಿಂದ ಅಂಗೀಕೃತವಾದಂತಹರಾಷ್ಟ್ರೀಯಕ್ರೀಡಾ ತಂಡಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ರಾಷ್ಟ್ರಕ್ಕೆ ಕೀರ್ತಿತಂದಕರ್ನಾಟಕದ ಕ್ರೀಡಾಪಟುಗಳಿಗೆ ರಾಜ್ಯ ಸರಕಾರದ ವತಿಯಿಂದ ನಗದು ಬಹುಮಾನ ನೀಡಲಾಗುತ್ತಿದೆ. ಅಂತರಾಷ್ಟ್ರೀಯ ಸಂಸ್ಥೆ ಮತ್ತುಇತರೆ ಮಾನ್ಯತೆ ಪಡೆದಕ್ರೀಡಾ ಸಂಸ್ಥೆಗಳು ನಡೆಸುವಅಧಿಕೃತ ಗೇಮ್ಸ್‍ಗಳಿಗೆ ಮಾತ್ರ ನಗದು ಪುರಸ್ಕಾರ ನೀಡಲಾಗುವುದು.ಅರ್ಹ ಕ್ರೀಡಾಪಟುಗಳು ಉಪನಿರ್ದೇಶಕರು, ಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆ,ಮಂಗಳೂರು ಇವರಿಂದಅರ್ಜಿ ನಮೂನೆ ಪಡೆದು ಭರ್ತಿ ಮಾಡಿದೃಢೀಕೃತ ದಾಖಲೆಗಳೊಂದಿಗೆ ಮೇ 15ರ ಒಳಗಾಗಿ ಕಚೇರಿಗೆ ಸಲ್ಲಿಸಬೇಕುಎಂದುಉಪನಿದೇಶಕರು, ಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆ, ದ. ಕ.ಜಿಲ್ಲೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.


Share