ಕ್ವಾರಂಟೈನ್ ತೆರವು

393
Share

ಬೈಲನರಸಾಪುರ ಹೋಂ ಕ್ವಾರಂಟೈನ್ ತೆರವು
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೇ 14 (ಕರ್ನಾಟಕ ವಾರ್ತೆ): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ನಂದಗುಡಿ ಹೋಬಳಿಯ ಬೈಲನರಸಾಪುರ ಗ್ರಾಮವನ್ನು ಹೋಂ ಕ್ವಾರಂಟೈನ್ ನಿಂದ ತೆರವು ಮಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ಪಿ.ಎನ್.ರವೀಂದ್ರ ಅವರು ಆದೇಶಿಸಿದ್ದಾರೆ.
ಬೈಲನರಸಾಪುರ ಗ್ರಾಮದಲ್ಲಿ ನಾಲ್ಕು ವ್ಯಕ್ತಿಗಳಿಗೆ ಕೋವಿಡ್-19 ಸೋಂಕು ದೃಢಪಟ್ಟ ಹಿನ್ನೆಲೆ ಗ್ರಾಮವನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಏಪ್ರಿಲ್ 10 ರಿಂದ ಮೇ 08 ರವರೆಗೆ ಬೈಲನರಸಾಪುರ ಗ್ರಾಮದಲ್ಲಿ ಯಾವುದೇ ಕೋವಿಡ್-19 ಪ್ರಕರಣ ದೃಢಪಡದಿರುವುದರಿಂದ, ಗ್ರಾಮವನ್ನು ಹೋಂ ಕ್ವಾರಂಟೈನ್ ನಿಂದ ತೆರವುಗೊಳಿಸಿ ಆದೇಶಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share