ಖ್ಯಾತ ಛಾಯಾಗ್ರಾಹಕರಾದ. ಶ್ರೀ ಕೆ.ವಿ.ಸುಬ್ಬ ರಾವ್-ನಿಧನ

23
Share

ಮೈಸೂರು ನಗರದ ಅತ್ಯಂತ ಹಳೆಯ ಖ್ಯಾತ ಛಾಯಾಗ್ರಾಹಕರಾದ. ಶ್ರೀ ಕೆ.ವಿ.ಸುಬ್ಬ ರಾವ್ ಇಂದು 94ನೇ ವಯಸ್ಸಿನಲ್ಲಿ ದೈವಾಧೀನರಾಗಿರುವರು. ಇವರು 1950ರಲ್ಲೆ ಧನ್ವಂತರಿ ರಸ್ತೆ ಗಾಯಿತ್ರಿ ಭವನ ಕಟ್ಟಡದಲ್ಲಿ ತಮ್ಮ ಸ್ಟುಡಿಯೋ ಆರಂಭಿಸಿದವರು. black &White photo ಕಾಲದಲ್ಲಿ ಇವರು ಎಲ್ಲರಿಗೂ ಚಿರಪರಿಚಿತರು ಇಂದಿಗೂ ಕೂಡ ಇವರ ಮನೆಯಲ್ಲಿ ಇವರು ಬಳಸುತ್ತಿದ್ದ ಕ್ಯಾಮೆರಾ, ಮಾನ್ಯುಯಲ್ ಪ್ರಿಂಟಿರ್ ಇನ್ನೂ ಅನೇಕ ಸಾಮಗ್ರಿಗಳನ್ನು ಪ್ರದರ್ಶನ ಮಾದರಿಯಲ್ಲಿ ಇಟ್ಟಿದ್ದರು ಇತ್ತೀಚಿಗೆ ಮೈಸೂರು ಮಹಾರಾಜರ ಅರಮನೆ ಯಲ್ಲೇ ಇವರ ಛಾಯಾ ಪ್ರದರ್ಶನ ಮಾಡಿ ಮಹಾರಾಜರ ಕುಟುಂಬ ದವರಿಂದ ರಾಜಗೌರವವನ್ನು ಸ್ವೀಕರಿಸಿದ್ದರು ಇವರ ಸಾರ್ಥಕ ವೃತ್ತಿ ಸೇವೆಗೆ ಗೌರವವನ್ನು ಸೂಚಿಸಿ ಛಾಯಾ ಕ್ಷೇತ್ರದ ಪರವಾಗಿ ಶ್ರದ್ಧಾಂಜಲಿ ಸಲ್ಲಿಸಿ
ದೇವರು ಅವರ ಆತ್ಮಕ್ಕೆ ಸದ್ಗತಿ ಪ್ರಾಪ್ತಿಯಾಗಲಿ ಎಂದು ಕೋರುತ್ತೇವೆ
.

ಇವರ ಪಾರ್ಥಿವ ಶರೀರವನ್ನು ದಿನಾಂಕ 6.12.2023 ರಂದು ಮಧ್ಯಾಹ್ನ 12 ಗಂಟೆವರೆಗೆ ಮನೆಯಲ್ಲಿ ನೋಡಲು ಅವಕಾಶವಿರುತ್ತದೆ ನಂತರ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ವಿದ್ಯುತ್ ಚಿತಗಾರದ ಆವರಣದಲ್ಲಿ ಇವರ ಅಂತ್ಯಕ್ರಿಯೆ ನೆರವೇರಲಿದೆ. ಇಂದು ಕುಟುಂಬಸ್ಥರು ತಿಳಿಸಿದ್ದಾರೆ.


Share