ಗಣಪತಿ ಆಶ್ರಮದ ನೆರವು ಸಚಿವರಿಂದ ಶ್ಲಾಘನೆ

ಮೈಸೂರು ನಗರದಲ್ಲಿರುವ ಅವಧೂತ ದತ್ತಪೀಠ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ಕ್ಕೆ ಜಲಸಂಪನ್ಮೂಲ ಸಚಿವರು ರಮೇಶ್ ಜಾರಕಿಹೊಳಿ ಭೇಟಿ ನೀಡಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಆಶೀರ್ವಾದವನ್ನು ಪಡೆದರು ಸಚಿವರನ್ನು ಆಶ್ರಮದ ಸಂಪ್ರದಾಯದಂತೆ ಗೌರವಿಸಿ ಸನ್ಮಾನಿಸಲಾಯಿತು ಲಾಕ್ಡೌನ್ ಸಮಯದಲ್ಲಿ ಮೈಸೂರು ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ನಗರದ ಬಡವರಿಗೆ ಪ್ರತಿದಿನ ನಾಲ್ಕು ಸಾವಿರ ಜನಕ್ಕೆ ಅನ್ನದಾನ ಮಾಡಿರುವುದನ್ನು ಸರ್ಕಾರದ ವತಿಯಿಂದ ಹಾಗೂ ವೈಯಕ್ತಿಕವಾಗಿ ಸಚಿವರು ಶ್ಲಾಘಿಸಿದರು ಸಚಿವರು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿದರು ಇದೇ ಸಮಯದಲ್ಲಿ ಸಂಸದ ಪ್ರತಾಪ್ ಸಿಂಹರವರು ಹಾಜರಿದ್ದು ಮೈಸೂರು ನಗರಕ್ಕೆ 30000 ಕೆಜಿ ಅಕ್ಕಿ 3000 ಎಣ್ಣೆ 3000 ಬೇಳೆ ನೀಡಿರುವ ಬಗ್ಗೆ ಪ್ರತಾಪ್ ಸಿಂಹ ವಿವರವಾಗಿ ಸಚಿವರಿಗೆ ತಿಳಿಸಿದರು