ಗಾಣಿಗ ರಿಗೆ ಎಂಎಲ್ಸಿ ಸ್ಥಾನ ನೀಡಲು ಆಗ್ರಹ

ಮೈಸೂರು ಭಾರತೀಯ ಜನತಾ ಪಕ್ಷದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಬೆನ್ನೆಲುಬಾಗಿ ನಿಂತು ದುಡಿಯುತ್ತಿರುವ ಶ್ರೀ ಬಿಜೆಪಿ ಸ್ವಾಮಿಯವರಿಗೆ ಎಂಎಲ್ಸಿ ಮಾಡುವ ಮುಖಾಂತರ ಮತ್ತು ಬಿಜೆಪಿಯಲ್ಲಿ ನಮ್ಮ ಜನ ಮೈಸೂರು ಜಿಲ್ಲಾ ಗಾಣಿಗರ ಜನಾಂಗಕ್ಕೆ ನಿಷ್ಠಾವಂತ ಕಾರ್ಯಕರ್ತರನ್ನು ನಿಗಮ ಮಂಡಳಿಗಳಲ್ಲಿ ಸ್ಥಾನ ನೀಡಬೇಕು ಎಂದು ಮೈಸೂರು ಜಿಲ್ಲಾ ಅಧ್ಯಕ್ಷರಾದ ಉಮೇಶ್ ಅವರು ಮನವಿ ಮಾಡಿದ್ದಾರೆ ಅವರು ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಗಾಣಿಗರ ಅಭಿವೃದ್ಧಿ ನಿಗಮ ಮಂಡಳಿ ಎಂದು ಸ್ಥಾಪನೆ ಮಾಡಿಕೊಡಬೇಕೆಂದು ಅವರು ಆಗ್ರಹಿಸಿದರು