ಗಾಯಿತ್ರಿ ಜಪ ಅನುಷ್ಠಾನ ಆಚರಣೆಯಿಂದ ಬದುಕಿನಲ್ಲಿ ಸಾಧನೆ ಸನ್ಮಾರ್ಗ ದೊರಕುತ್ತದೆ : ಡಿಟಿ ಪ್ರಕಾಶ್
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ ಹಾಗೂ ಮೈಸೂರು ಬ್ರಾಹ್ಮಣ ಯುವ ವೇದಿಕೆ ಜಯನಗರದಲ್ಲಿರುವ ರಾಮಮಂದಿರದಲ್ಲಿ
ಯಜುರ್ವೇದದ ಯಜುರ್ ಉಪಾಕರ್ಮವನ್ನು ಸಾಮೂಹಿಕವಾಗಿ ಬ್ರಾಹ್ಮಣರು ಯಜ್ಞೋಪವೀತಂ ಜನಿವಾರ ಬದಲಾಯಿಸಿಕೊಂಡು ಸಂಧ್ಯಾವಂದನೆ, ಗಾಯತ್ರಿ ಜಪ ಹೋಮವನ್ನ ವೇದಬ್ರಹ್ಮ ಅರುಣ್ ಕುಮಾರ್ ಶರ್ಮ ನೇತೃತ್ವದಲ್ಲಿ ಆಚರಿಸಿದರು, ಯಜುರ್ ಉಪಾಕರ್ಮದ ಅಂಗವಾಗಿ ಜನಿವಾರ ಧಾರಣೆ ಮಾಡಿದ ಸಮಾಜದ ಬ್ರಾಹ್ಮಣರಿಗೆ ಸಂಧ್ಯಾವಂದನೆ ಪುಸ್ತಕ ಹಾಗೂ ಗಾಯತ್ರಿ ಮಂತ್ರದ ಪುಸ್ತಕ ನೀಡಿ ಯಜುರ್ ಉಪಾಕರ್ಮ ಶುಭಾಶಯ ಕೋರಿ ಮಾತನಾಡಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಗಾಯತ್ರಿ ಮಂತ್ರ, ಅತ್ಯಂತ ಪ್ರಭಾವಶಾಲಿಯಾದುದು, ತೇಜಸ್ಸು, ಬುದ್ಧಿಶಕ್ತಿ ಮತ್ತು ಚಿತ್ತವೃತ್ತಿಯನ್ನು ಪಾವನಗೊಳಿಸುವುದೇ ಗಾಯತ್ರಿ ಮಂತ್ರ, ಗಾಯತ್ರಿ ಮಂತ್ರದಿಂದ ಉತ್ತಮ ಸಂಸ್ಕಾರ
“ಬ್ರಹ್ಮ ಪವಿತ್ರವಾದ ಸೂರ್ಯನಾರಾಯಣನಿಂದ ಉದ್ಭವಿಸಲ್ಪಟ್ಟ ಗಾಯತ್ರಿ ಮಂತ್ರ, ಅತ್ಯಂತ ಪ್ರಭಾವಶಾಲಿಯಾದುದು. ಈ ಮಂತ್ರವು ‘ನನಗೆ ತೇಜಸ್ಸನ್ನು ಕೊಡು, ನನ್ನ ಬುದ್ಧಿಶಕ್ತಿಯನ್ನು ಅರಳಿಸು, ಮತ್ತು ಚಿತ್ತವೃತ್ತಿಯನ್ನು ಪಾವನಗೊಳಿಸು’ ಎನ್ನುವ ಅರ್ಥದೊಂದಿಗೆ ಎಲ್ಲರಿಗೂ ಶುಭವಾಗಲಿ ಎನ್ನುವ ಪರ್ಯಾಯ ಸಂದೇಶವನ್ನು ನೀಡುತ್ತದೆ. ಸ್ವಸ್ಥಿಕ ಮುದ್ರೆಯಲ್ಲಿ ಅಡ್ಡಗೆರೆ ಮತ್ತು ಉದ್ದಗೆರೆಯು ಸಮಾನವಾಗಿದ್ದು, ಕ್ರಮವಾಗಿ ಧರ್ಮದ ಪಾಲನೆ ಮತ್ತು ಬ್ರಹ್ಮಜ್ಞಾನದ ಸಂಪಾದನೆ ಎತ್ತರಕ್ಕೆ ಬೆಳೆಯಲಿ ಎಂದು ತಿಳಿಸುತ್ತದೆ. ಪ್ರತಿದಿನದ ಸೂರ್ಯೋದಯವನ್ನು ನೋಡಿ ಅನುಭವಿಸಿದರೆ, ಅದೇ ಶುಭಘಳಿಗೆಯಾಗಿ ಪವಿತ್ರವೆನಿಸುವುದು.” ಎಂದು ಹೇಳಿದರು
ಜಯನಗರ ಶ್ರೀರಾಮ ಮಂದಿರ ಅಧ್ಯಕ್ಷರಾದ ವೇದ ಬ್ರಹ್ಮ ಅರುಣ್ ಕುಮಾರ ಶರ್ಮ, ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ. ಪ್ರಕಾಶ್, ಗಾಯಕ ಶ್ರೀಹರ್ಷ, ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಪುನೀತ್ ಜಿ ಕೂಡ್ಲೂರು, ವೆಂಕಟೇಶ್, ಸೀತರಾಮು, ಶ್ರೀವಾಸ ವಿಠ್ಠಲ್, ವಿಷ್ಣು, ರಾಕೇಶ್, ನಾಗರಾಜು, ರಮೇಶ್, ರವಿಶಂಕರ್, ಆನಂದರಾಮು ಇನ್ನಿತರರು ಇದ್ದರು.