ಗೀಸರ್ ಗ್ಯಾಸ್ ದುರಂತ ಗಂಡ ಹೆಂಡತಿ ಸಾವು ಮಗು ಬಚಾವ್

Share

ಜಯಪುರ್ : ರಾಜಸ್ಥಾನದ ಬಿಲ್ವಾರ ಗ್ರಾಮದಲ್ಲಿ ಗಂಡ ಹೆಂಡತಿ ಮತ್ತು ಮಗು ಸ್ನಾನ ಮಾಡಲು ಬಾತ್ರೂಮಿನ ಬಾಗಿಲು ಹಾಕಿಕೊಂಡಾಗ ಒಳಗಡೆ ಗೀಸರ್ ನ ಗ್ಯಾಸ್ ಸೋರುವಿಕೆಯಿಂದ ಉಸಿರುಗಟ್ಟಿ ಗಂಡ ಹೆಂಡತಿ ಅಸು ನೀಗಿದ್ದು ಮಗು ಪವಾಡ ಸದೃಶ ಬದುಕುಳಿದ ಘಟನೆ ವರದಿಯಾಗಿದೆ.
ಶಹಾಪುರ ನಿವಾಸಿಗಳಾದ ಶಿವನಾರಾಯಣ ಜಾನ್ವಾರ್ (37), ಅವರ ಪತ್ನಿ ಕವಿತಾ ಜಾನ್ವರ್ (35) ಮೃತ ದಂಪತಿಗಳು. ಮಗ ವಿಹಾನ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹೋಲಿ ಹಬ್ಬದ ಆಟದ ನಂತರ ಸ್ನಾನದ ಕೊಠಡಿಯಲ್ಲಿ ಈ ದುರ್ಘಟನೆ ನಡೆದಿದ್ದು ಸ್ನಾನಕ್ಕೆ ಹೋದವರು ಬಹಳ ಹೊತ್ತು ಹೊರಗೆ ಬಾರದಿದ್ದಾಗ ಬಾಗಿಲು ಒಡೆದು ನೋಡಲಾಗಿ ಮೂವರು ಮೂರ್ಛೆಯ ಸ್ಥಿತಿಯಲ್ಲಿ ಬಿದ್ದಿದ್ದು ಮಗು ಮಾತ್ರ ಬದುಕುಳಿದಿದೆ.


Share