ಗೇಟ್ ಬಂದ್, ರಾಜ್ಯಪಾಲರು ತಬ್ಬಿಬ್ಬು

Share

ಯಾವುದೇ ಮಾರ್ಗ ಸಾಮಾನ್ಯ ಅಥವಾ ವಿಐಪಿ ಮಾರ್ಗ ಆಗಿರಲಿ ನಾಯಕರು ಮುಂದೆ ಹೋಗುತ್ತಿದ್ದರೆ ಅವರನ್ನು ಹಿಂಬಾಲಕರು ದೌಡಾಯಿಸಿ ಓಡುವುದು ಸಾಮಾನ್ಯ,
ಇದಕ್ಕೆ ಹೊರತಾಗಿರಲಿಲ್ಲ ಇಂದು ನರೇಂದ್ರ ಮೋದಿ ಹಾಗೂ ರಾಜ್ಯಪಾಲ ಗೆಲೋಟ್ ಪ್ರಸಂಗ.
ಇಂದು ಅಪರಾಹ್ನ ಬೆಂಗಳೂರು ಕೃಷ್ಣರಾಜಪುರ – ವೈಟ್ ಫೀಲ್ಡ್ ಗೆ ಮೆಟ್ರೋ ವಿಸ್ತಿರುತ ರೈಲ್ವೆ ಪ್ರಯಾಣ ಪ್ರಧಾನಿಗಳ ಹಸ್ತದಿಂದ ಉದ್ಘಾಟನೆಗೊಂಡಿತು. ಪೂರ್ವ ಯೋಜನೆಯಂತೆ ಒಂದು ಕಿಲೋಮೀಟರ್ ಪ್ರಯಾಣಿಸಲು ಮೋದಿ ಯವರು ಸಾಮಾನ್ಯ ಪ್ರಜೆಯಂತೆ ಕೌಂಟರ್ನಲ್ಲಿ ಟಿಕೆಟ್ ಪಡೆದು. ಆಟೋಮೆಟಿಕ್ ಗೇಟ್ ನಲ್ಲಿ ಕಾಯಿನ್ ಹಾಕಿ ಒಳ್ಳೆ ಪ್ರವೇಶಿಸಿದರು. ಎಲ್ಲರಿಗೂ ಗೊತ್ತಿರುವಂತೆ ಒಂದು ಟೋಕನ್ ನಿಗೆ ಒಮ್ಮೆ ಮಾತ್ರ ಒಬ್ಬರಿಗೆ ತೆರೆದುಕೊಳ್ಳುವುದು, ಆದರೆ ಇದನ್ನು ಅರಿಯದ ರಾಜ್ಯಪಾಲ ಗಿಲೋಟ್ ರವರು ಸರ ಸರನೆ ಮೋದಿಯವರನ್ನು ಹಿಂಬಾಲಿಸುತ್ತ ಒಂದೇ ಗೇಟ್ನಲ್ಲಿ ಪ್ರವೇಶ ಪಡೆಯಲು ತಮಗಾರಿವಿಲ್ಲದಂತೆ ಮುನ್ನುಗ್ಗಿದರು, ಗೆಲೋಟ್ ಪ್ರವೇಶಿಸುತ್ತಿದ್ದಂತೆ ಗೇಟ್ ಲಾಕ್ ಆಗಿ ಹೋಯಿತು. ಒಡನೆಯೇ ಗೆಲೋಟ್ ತಬ್ಬಿಬ್ಬಾದರು. ರಾಜ್ಯಪಾಲರು ಅವಾಕ್ಕಾಗಿ ನಿಂತು ಗೇಟ್ ಅನ್ನು ಕೈಯಲ್ಲಿ ಹಿಡಿದು ಅತ್ತ ಇತ್ತ ನೋಡಲು ಪ್ರಾರಂಭಿಸಿದರು. ಒಡನೆ ಇದನ್ನು ಅರಿತ ಬೇರೊಬ್ಬರು ಮತ್ತೊಂದು ಕಾಯಿನ್ ಹಾಕಿ ಗೇಟ್ ತೆಗೆದು ಒಳ ಆವರಣಕ್ಕೆ ಪ್ರವೇಶ ಕಲ್ಪಿಸಿದರು. ಇದು ನೋಡುವವರಿಗೆ ಹಾಸ್ಯಮಯವಾಗಿ, ಕಿಲ-ಕಿಲ ನಕ್ಕಿದ್ದು ಕಂಡುಬಂದಿತು.

Share