ಗ್ರಹ ಮಂಡಲದಲ್ಲಿ ಅಪರೂಪದಲ್ಲೇ ಅಪರೂಪದ ವಿದ್ಯಮಾನ.

Share

13-09-2020ರ ಭಾನುವಾರದ ದಿನ ಗ್ರಹ ಮಂಡಲದಲ್ಲಿ ಅಪರೂಪದಲ್ಲೇ ಅಪರೂಪದ ವಿದ್ಯಮಾನವನ್ನು ನಾವೆಲ್ಲರೂ ಕಾಣಬಹುದಾಗಿದೆ. ಅಂದು ಛಾಯಾಗ್ರಹಗಳಾದ ರಾಹು-ಕೇತುಗಳನ್ನು ಹೊರತುಪಡಿಸಿ, ಮಿಕ್ಕ ಏಳು ಗ್ರಹಗಳಲ್ಲಿ ಆರು ಗ್ರಹಗಳು ತಮ್ಮ ತಮ್ಮ ಸ್ವಕ್ಷೇತ್ರಗಳಲ್ಲಿ ಇರುವುದು ಅತ್ಯಂತ ವಿಶೇಷವು. ಗುರುವು (ಪೂರ್ವಾಷಾಢ) ಧನಸ್ಸು ರಾಶಿಯಲ್ಲಿ, ಶನಿಯು(ಉತ್ತರಾಷಾಢ) ಮಕರದಲ್ಲಿ, ಕುಜನು(ಅಶ್ವಿನಿ) ಮೇಷದಲ್ಲಿ, ಚಂದ್ರನು ಕಟಕದಲ್ಲಿ ಶುಕ್ರನೊಂದಿಗೆ(ಪುನರ್ವಸು ನಕ್ಷತ್ರದಲ್ಲಿ), ರವಿಯು ಸಿಂಹದಲ್ಲಿ(ಉತ್ತರಾ ನಕ್ಷತ್ರ), ಬುಧನು ಉಚ್ಛ ಕ್ಷೇತ್ರವು, ಸ್ವಕ್ಷೇತ್ರವೂ ಆದ ಕನ್ಯಾರಾಶಿಯಲ್ಲಿ(ಹಸ್ತಾ ನಕ್ಷತ್ರ) ಇರುವುದು ವಿಶೇಷವೂ, ಅಪರೂಪವೂ ಆಗಿದೆ.

ವಾರ ಗ್ರಹರಾಜನಾದ ರವಿಯು ವಾರ. ಈ ಸಂದರ್ಭದಲ್ಲಿ ಬೆಳಿಗ್ಗೆ 11ರ ಸಮಯಕ್ಕೆ ವೃಶ್ಚಿಕ ಲಗ್ನ(10-45ರಿಂದ12-45ರ ವರೆಗೆ) ಇರುವುದು. ಆ ಲಗ್ನಕ್ಕೆ ಹೊಂದಿಕೊಂಡಂತೆ, ಗುರುವು ಧನಸ್ಥಾನವಾದ 2ನೇ ಮನೆಯಲ್ಲಿ, ಶನಿಯು 3ರಲ್ಲಿ, ಕುಜನು 6ರಲ್ಲಿ, ಚಂದ್ರನು (ಶುಕ್ರನೊಂದಿಗೆ)9ರಲ್ಲಿ, ರವಿಯು 10ರಲ್ಲಿ, ಬುಧನು 11ರಲ್ಲಿ ಇರುತ್ತಾರೆ.

ಇದು ಅತ್ಯಂತ ಸುಸಮಯ. ಅಂದು ಸುಮಾರು ಬೆಳಿಗ್ಗೆ 10-45ರಿಂದ 12-45ರ ವರೆಗೂ ವೃಶ್ಚಿಕ ಲಗ್ನ ಇರುವುದು. ಈ ಸಮಯದಲ್ಲಿ ಯಾರು ಯಾವುದೇ ಸತ್ಕಾರ್ಯ, ಜಪ,ಹೋಮ,ತಪ, ದಾನ, ಗೋ ಸೇವೆ, ದೀನ ಜನೋಪಚಾರ, ಮಂತ್ರ ಪಾರಾಯಣ, ಸಹಸ್ರನಾಮದಿ ಪಾರಾಯಣಗಳು, ಪ್ರಾಣಿ-ಪಕ್ಷಿಗಳಿಗೆ ಆಹಾರ ಕೊಡವುದು, ಸತ್ಪಾತ್ರರಿಗೆ ದಾನ, ಮಹಾಲಯ ಪಕ್ಷದ ತನ್ನಿಮಿತ್ತ ಕಾರ್ಯ ಇತ್ಯಾದಿ ಸತ್ಕಾರ್ಯ ಮಾಡುವುದು ಶ್ರೇಯಸ್ಕರ.

ಈ ದಿನದ ವಿಶೇಷತೆಗಳನ್ನು ಇನ್ನೂ ಹೀಗೆಯೇ ಹೇಳುತ್ತಾ ಹೋದಲ್ಲಿ, ಪ್ರಸ್ತುತಿ ದೀರ್ಘವಾಗುತ್ತದೆ.

ಸಾಧ್ಯವಾದಷ್ಟೂ ಈ ಸಮಯದ ಸದುಪಯೋಗ ಮಾಡಿಕೊಳ್ಳಿ. ಕೊನೇಪಕ್ಷ, ಈ ಖಗೋಳ ಗ್ರಹ ವಿಶೇಷವನ್ನಾದರೂ ತಿಳಿದುಕೊಳ್ಳೋಣ.

||ಲೋಕಾ ಸಮಸ್ತಾ ಸುಖಿನೋ ಭವಂತು||

ನರಹರಿ ಕರಣೀಕ


Share