ಗ್ರಾಹಕರ ಆಂದೋಲನಕ್ಕೆ ನಿಮ್ಮ ಬೆಂಬಲ ಕೊಡಿ : ಚಂದ್ರಶೇಖರ್*

 

*ಗ್ರಾಹಕರ ಅಧಿಕಾರದ ರಕ್ಷಣೆಗಾಗಿ ಅಖಿಲ ಭಾರತೀಯ ಗ್ರಾಹಕ ಪಂಚಾಯಿತಿನ ಸದಸ್ಯರಾಗಿ ಮತ್ತು ಗ್ರಾಹಕರ ಆಂದೋಲನಕ್ಕೆ ನಿಮ್ಮ ಬೆಂಬಲ ಕೊಡಿ : ಚಂದ್ರಶೇಖರ್*

ಮೈಸೂರು: ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಸದಸ್ಯತ್ವ ಅಭಿಯಾನವು ಆಗಸ್ಟ್ 1ರಿಂದ 31ರವರೆಗೆ ನಡೆಯಲಿದ್ದು ಸದಸ್ಯತ್ವ ಅಭಿಯಾನವು ಚಾಮುಂಡಿಪುರಂನಲ್ಲಿ ಗ್ರಾಹಕರನ್ನು ಗ್ರಾಹಕ ಪಂಚಾಯಿತಿಗೆ ಸದಸ್ಯತ್ವ ಪಡೆಯುವ ಮೂಲಕ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷರಾದ ಚಂದ್ರಶೇಖರ್ ಚಾಲನೆ ನೀಡಿ
ಮಾತನಾಡಿದ ಅವರು
ಅಖಿಲ ಭಾರತೀಯ ಗ್ರಾಹಕ ಪಂಚಾಯಿತಿನ ಸ್ವರ್ಣ ಜಯಂತಿ ವರ್ಷದ ಸುಸಂದರ್ಭದಲ್ಲಿ ವಾರ್ಷಿಕ ಸದಸ್ಯತ್ವ ಅಭಿಯಾನವನ್ನು ಆಗಸ್ಟ್ 1ರಿಂದ 31ರವರೆಗೆ ನಡೆಯಲಿದೆ, ಅದಕ್ಕಾಗಿ ಎಲ್ಲಾ ಕಾರ್ಯಕರ್ತರು ದೃಢ ನಿಶ್ಚಯದೊಂದಿಗೆ ಒಬ್ಬೊಬ್ಬರು ಕನಿಷ್ಠ 10 ಸದಸ್ಯತ್ವವನ್ನು ಮಾಡಲೇಬೇಕೆಂದು ಸಂಕಲ್ಪವನ್ನು ಮಾಡಿ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಬೇಕಾಗಿ ಪ್ರಾರ್ಥನೆ ಮಾಡಿದರು , ತಿಳಿಸಿರುವಂತೆ ಈ ಬಾರಿ ಕರ್ನಾಟಕದಲ್ಲಿ ಎಲ್ಲಾ ಜಿಲ್ಲೆಯ ಕಾರ್ಯಕರ್ತರು ಹೆಚ್ಚು ಹೆಚ್ಚು ಸದಸ್ಯರನ್ನು ಆನ್ಲೈನ್ ನಲ್ಲಿ 100 ರೂ ಪಾವತಿಸಿ ನೋಂದಣಿ ಮಾಡಬೇಕಾಗಿ ಈ ಮೂಲಕ ತಿಳಿಸುತ್ತಿದ್ದೇವೆ. ಸದಸ್ಯತ್ವ ಅಭಿಯಾನದಡಿಯಲ್ಲಿ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಗ್ರಾಹಕ ಸಮಸ್ಯೆ ಸಮಾಧಾನ ಕುರಿತು ಚರ್ಚಾ ಗೋಷ್ಠಿಗಳನ್ನು ಸಂಪರ್ಕ ಮಾಡುವ ಮೂಲಕ ನಮ್ಮ ಗ್ರಾಹಕ ಆಂದೋಲನವನ್ನು ಜನಾಂದೋಲನ ನಿಟ್ಟಿನಲ್ಲಿ ಗ್ರಾಹಕರಿಲ್ಲರಿಗೂ ಸದಸ್ಯತ್ವ ಪಡೆಯಲು ಪ್ರೋತ್ಸಾಹಿಸಬೇಕಾಗಿ ಹಾಗೂ ಆನ್ಲೈನ್ ಮೆಂಬರ್ ಶಿಪ್ ಮಾಡುವಲ್ಲಿಯೂ ಕಾರ್ಯಕರ್ತರು ಎಲ್ಲರಿಗೂ ಸಹಕರಿಸಬೇಕಾಗಿ ವಿನಂತಿಸುತ್ತೇವೆ.

ಎಲ್ಲಾ ಗ್ರಾಹಕರು ಆನ್‌ಲೈನ್‌ನಲ್ಲಿ ರೂ.100/- ಚಂದಾದಾರಿಕೆ ಶುಲ್ಕವನ್ನು ಪಾವತಿಸುವ ಮೂಲಕ ABGPಗೆ ಬೆಂಬಲಿಸಲು ಸದಸ್ಯರಾಗಬೇಕೆಂಬ ವಿನಮ್ರ ವಿನಂತಿ.

ನಿಮ್ಮ ಎಲ್ಲ ಸಂಬಂಧಿಕರು, ಸ್ನೇಹಿತರು, ರೈತರು, ವೃತ್ತಿಪರರು, ಉದ್ಯೋಗಿಗಳು, ಹಿರಿಯ ನಾಗರೀಕರು, ಗೃಹಿಣಿಯರು, ವಿದ್ಯಾರ್ಥಿಗಳು, ಮುಂತಾದವರು.. ನಿಮ್ಮ ಮತ್ತು ನಿಮ್ಮ ಸಂಪರ್ಕದಿಂದ WhatsApp ಸಂದೇಶವನ್ನು ಕಳುಹಿಸುವ ಮೂಲಕ ಗರಿಷ್ಠ ಸದಸ್ಯರನ್ನಾಗಿ ಮಾಡಲು ಸಹಕರಿಸುವಂತೆ ವಿನಮ್ರವಾಗಿ ವಿನಂತಿಸುತ್ತೇವೆ.

ಗ್ರಾಹಕ ಪಂಚಾಯಿತಿ ಸದ್ಯಸರಾಗಲು ಆಗಲು ಇಚ್ಛಿಸುವವರು ಹಾಗೂ ಮಾಹಿತಿ ಪಡೆಯಲು
98800 19400 ಸಂಪರ್ಕಿಸಬಹುದು

ಇದೇ ಸಂದರ್ಭದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷರಾದ ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಸಹ ಕಾರ್ಯದರ್ಶಿ ಆನಂದ್, ಎಸ್ ರಮೇಶ್, ಖಜಾಂಜಿ ಶ್ರೀಧರ್ಮೂರ್ತಿ ,ಹೋಟೆಲ್ ಉದ್ಯಮಿ ಜೈರಾಮ್, ಕೇಬಲ್ ಮಹೇಶ್, ಅಜಯ್ ಶಾಸ್ತ್ರಿ, ಮೈಲಾ ವಿಜಯ್ ಕುಮಾರ್, ಬೈರತಿ ಲಿಂಗರಾಜು, ಎಸ್ ಎನ್ ರಾಜೇಶ್, ಸುಚೇಂದ್ರ, ರಾಕೇಶ್, ಕೆಂಗೇಗೌಡ, ಶ್ರೀನಿವಾಸ್, ಹಾಗೂ ಇನ್ನಿತರರು ಭಾಗವಹಿಸಿದ್ದರು